Bengaluru, ಮಾರ್ಚ್ 4 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಸೋಮವಾರ ಮಾರ್ಚ್ 3ರ ಸಂಚಿಕೆಯಲ್ಲಿ ಮನೆ ಉಳಿಸಿಕೊಳ್ಳಲು ಭಾಗ್ಯ ಬಹಳಷ್ಟು ಕಷ್ಟ ಪಡುತ್ತಿದ್ದಾಳೆ. ಅವಳ ಕಷ್ಟ ಕಂಡು ಮನೆಯವರು ಮಾತ್ರವಲ್ಲದೆ, ನೆರೆಮನೆಯವರು ಕೂಡ ಮರುಗುತ್ತಿದ್ದಾರೆ. ತಾಂಡವ್‌ ಮತ್ತು ಶ್ರೇಷ್ಠಾಗೆ ಎಲ್ಲರೂ ಹಿಡಿಶಾಪ ಹಾಕುತ್ತಿದ್ದಾರೆ. ಚಿನ್ನದ ಒಡವೆ ಹಿಡಿದುಕೊಂಡು ಮನೆಯ ಹೊರಗೆ ನಿಂತಿರುವ ತಾಂಡವ್ ಮತ್ತು ಶ್ರೇಷ್ಠಾ, ಭಾಗ್ಯಳನ್ನು ಕಂಡು ಕುಹಕವಾಡಿದ್ದಾರೆ. ಭಾಗ್ಯ, ತಾಂಡವ್‌ಗೆ ಮನೆಯ ಹೊರಗೆ ನಿಂತು ವಾಚ್‌ಮೆನ್ ಕೆಲಸ ಮಾಡುವುದು ಬೇಡ, ನಿಮ್ಮ ಕೆಲಸ ನೋಡಿಕೊಳ್ಳಿ, ಇಲ್ಲವಾದರೆ, ಮನೆ ಜಪ್ತಿಗೆ ಬರುವ ಬ್ಯಾಂಕ್ ಅಧಿಕಾರಿಗಳ ಎದುರು ನಿಂತು ಮಾತನಾಡಿ ಎಂದು ಹೇಳಿದ್ದಾಳೆ. ಭಾಗ್ಯಳ ಮಾತುಗಳು ತಾಂಡವ್‌ಗೆ ತೀವ್ರ ಅವಮಾನ ಉಂಟುಮಾಡಿದೆ. ಅವನು ಕೂಡಲೇ ಅಲ್ಲಿಂದ ಹೊರಟಿದ್ದಾನೆ. ಸ್ವಾಭಿಮಾನಿ ಭಾಗ್ಯಳ ಮಾತು ಕೇಳಿ ಶ್ರೇಷ್ಠಾ ಕೂಡ ಉರಿದುಹೋಗಿದ್ದಾಳೆ.

ಮನೆಯಿಂದ ಹೊರಟ ಭಾಗ್ಯ, ಸಾಲದ ತಿಂಗಳ ಕಂತು ಕಟ್ಟಲು ಹಣ ಹೊಂದಿಸಲು ಎಲ್ಲ ರೀತಿಯ ಪ್...