ಭಾರತ, ಏಪ್ರಿಲ್ 11 -- ಕಳೆದ ವರ್ಷ ಮಲೆನಾಡ ತಣ್ಣನೆಯ ಪರಿಸರದಲ್ಲಿ 'ಶಾಖಾಹಾರಿ' ಚಿತ್ರದ ಮೂಲಕ ಕೊಲೆ ರಹಸ್ಯದ ಕಥೆ ಹೇಳಿದ್ದ ರಂಗಾಯಣ ರಘು, ಈಗ ಇನ್ನೊಂದು ಕೊಲೆಯ ರಹಸ್ಯದ ಕಥೆಯೊಂದಿಗೆ ಬಂದಿದ್ದಾರೆ. ಈ ಬಾರಿ ನಿರ್ದೇಶಕ ಜನಾರ್ಧನ್‍ ಚಿಕ್ಕಣ್ಣ ಮತ್ತು ನಿರ್ಮಾಪಕ ಹೇಮಂತ್‍ ಎಂ. ರಾವ್‍ ಅವರಿಗೆ ಜೊತೆಯಾಗಿದ್ದಾರೆ. ಟ್ರೇಲರ್‌ನಲ್ಲೇ ಸಾಕಷ್ಟು ಕುತೂಹಲ ಮೂಡಿಸಿದ್ದ ಚಿತ್ರವು, 3ವರ್ಷಗಳ ಬಳಿಕ ಕೊನೆಗೂ ಬಿಡುಗಡೆಯಾಗಿದೆ. ಇಷ್ಟಕ್ಕೂ ಚಿತ್ರ ಹೇಗಿದೆ? ಇಲ್ಲಿದೆ ಉತ್ತರ.

ಮಲೆನಾಡ ಸಣ್ಣ ಹಳ್ಳಿಯಲ್ಲಿ ಒಂದು ಪೊಲೀಸ್‍ ಠಾಣೆ. ಆ ಠಾಣೆ ಶುರುವಾದಾಗಿನಿಂದ ಒಂದು ಕೇಸ್‍ ಸಹ ಇಲ್ಲ. ಹೀಗಿರುವಾಗಲೇ, ಆ ಊರಿನ ಜಮೀನ್ದಾರ ಶಂಕರಪ್ಪ (ಶರತ್‍ ಲೋಹಿತಾಶ್ವ) ನಿಧನರಾಗುತ್ತಾರೆ. ಅದೊಂದು ಸಹಜ ಸಾವು ಅಂದುಕೊಂಡವರಿಗೆ ಅದು ಸಹಜ ಸಾವಲ್ಲ, ಕೊಲೆ ಎಂದು ಅದೇ ಠಾಣೆಯಲ್ಲಿ ಎಷ್ಟೋ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್‍ ಅಧಿಕಾರಿ ಹೇಳುತ್ತಾರೆ. ಅವರಿಗೆ ಅದು ಕೊಲೆ ಅಂತ ಯಾಕನಿಸಿತು? ಆ ಕೊಲೆ ಯಾರು ಮಾಡಿದರು? ಅದರ ಹಿಂದಿನ ಮರ್ಮವೇನು? ಎನ್ನುವು...