Bangalore, ಮಾರ್ಚ್ 26 -- ಅಜ್ಞಾತವಾಸಿ ಎಂಬ ಸಿನಿಮಾ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಆದರೆ, ಈ ಸಿನಿಮಾ ಕಳೆದ ಮೂರು ವರ್ಷಗಳಿಂದ ಬಿಡುಗಡೆಯಾಗದೆ ಕಾಯುತ್ತಿತ್ತು. ಗುಲ್ಟೂ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ನಿರ್ದೇಶನದ ಸಿನಿಮಾ ಇದಾಗಿದೆ. ಈ ಚಿತ್ರದ ಶೂಟಿಂಗ್‌ ಆರಂಭವಾಗಿ ಮೂರು ವರ್ಷಗಳು ಕಳೆದಿವೆ. ಮುಂದಿನ ತಿಂಗಳು ಅಂದರೆ ಏಪ್ರಿಲ್‌ 11ರಂದು ಈ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರವನ್ನು ನಿರ್ಮಾಣ ಮಾಡಿರುವ ಹೇಮಂತ್‌ ಎಂ ರಾವ್‌ ಅವರು "ಈ ಚಿತ್ರದ ಬಿಡುಗಡೆಯನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡಿರುವುದಾಗಿ" ಹೇಳಿದ್ದಾರೆ. "ಮೂರು ವರ್ಷ ಸುದೀರ್ಘ ಸಮಯ ಎನ್ನುವುದು ನಿಜ. ನಾವು ಸಿನಿಮಾ ಬಿಡುಗಡೆಗೆ ಸಿದ್ಧರಾಗಿದ್ದೇವು. ಆದರೆ, ನಾನು ಬಿಡುಗಡೆಯನ್ನು ವಿಳಂಬ ಮಾಡಿದೆ. ತಾಂತ್ರಿಕ ಕಾರಣಗಳಿಂದ ಈ ಸಿನಿಮಾ ಬಿಡುಗಡೆಗೆ ಬ್ರೇಕ್‌ ಹಾಕಿದೆ. ಯಾಕೆಂದರೆ, ಆಗ ಈ ಚಿತ್ರ ಬಿಡುಗಡೆಗೆ ಮಾರುಕಟ್ಟೆ ಅನುಕೂಲವಾಗಿರಲಿಲ್ಲ" ಎಂದು ದಿ ಹಿಂದೂವಿಗೆ ನೀಡಿದ ಸಂದರ್ಶನದಲ್ಲಿ ಹೇಮಂತ್‌ ಮಾಹಿತಿ ನೀಡಿದ್ದಾರೆ. ಈ ಸಿನಿಮಾದಲ್...