ಭಾರತ, ಏಪ್ರಿಲ್ 24 -- ಯುಪಿಎಸ್‌ಸಿ ಯಶೋಗಾಥೆ: ಕೇಂದ್ರೀಯ ಲೋಕಸೇವಾ ಆಯೋಗ ಇತ್ತೀಚೆಗೆ ಪ್ರಕಟಿಸಿದ ನಾಗರಿಕ ಸೇವಾ ಪರೀಕ್ಷೆ 2024ರ ಫಲಿತಾಂಶದಲ್ಲಿ ಗ್ವಾಲಿಯರ್‌ ನಿವಾಸಿ ದೇವ್ ಪ್ರಭಾಕರ್ ಸಿಂಗ್ ತೋಮರ್ ಅಖಿಲ ಭಾರತ ಮಟ್ಟದಲ್ಲಿ 629ನೇ ರ‍್ಯಾಂಕ್ ಗಳಿಸಿದ್ದಾರೆ. ಅಷ್ಟೇ ಆಗಿದ್ದರೆ ವಿಶೇಷ ಅಂತ ಅನ್ನಿಸ್ತಿರಲಿಲ್ಲ. ಆದರೆ ದೇವ್ ಪ್ರಭಾಕರ್ ಸಿಂಗ್ ಥೋಮರ್ ಅವರ ಕೌಟುಂಬಿಕ ಹಿನ್ನೆಲೆ, ಅವರ ಕಲಿಕೆ ಮತ್ತು ವೃತ್ತಿಯ ಹಿನ್ನೆಲೆ ತುಸು ಗಮನಸೆಳೆಯುವಂಥದ್ದು. ಹೌದು, ದೇವ್ ಪ್ರಭಾಕರ್ ಸಿಂಗ್ ಅವರ ಅಜ್ಜ ರಾಮಗೋವಿಂದ ಸಿಂಗ್ ತೋಮರ್‌ ಚಂಬಲ್‌ನ ಕುಖ್ಯಾತ ಡಕಾಯಿತರಾಗಿದ್ದರು. ಆದರೆ ದೇವ್ ಅವರ ತಂದೆ ಬಲವೀರ್ ಸಿಂಗ್ ತೋಮರ್‌ ಶಿಕ್ಷಣ ಪಡೆದು ಶಾಲೆಯೊಂದರಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡಿ ತಮ್ಮ ಬದುಕಿನ ಪಥ ಬದಲಾಯಿಸಿಕೊಂಡಿದ್ದರು. ಈಗ ದೇವ್ ಪ್ರಭಾಕರ್ ಸಿಂಗ್ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅಂತಿಮ ಪ್ರಯತ್ನದಲ್ಲಿ ಗೆಲುವು ಕಂಡಿದ್ದಾರೆ.

ದೇವ್‌ ಪ್ರಭಾಕರ್ ಸಿಂಗ್ ತೋಮರ್ ಐಐಟಿ ರೋಪಾರ್‌ನಲ್ಲಿ ವ್ಯಾಸಂಗ ಮುಗಿಸಿ ಮೆಡಿಕಲ್ ...