ಭಾರತ, ಫೆಬ್ರವರಿ 11 -- ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಫೆಬ್ರುವರಿ 10ರ ಸಂಚಿಕೆಯಲ್ಲಿ ಮನೆಯಲ್ಲಿ ತಿಂಡಿ ಮಾಡಿ ಕೊಡುವವರು ಇಲ್ಲದೇ ಇದ್ದಾಗ ಬೇರೆ ದಾರಿ ಕಾಣದೆ ತಾನೇ ಕಷ್ಟಪಟ್ಟು ಅಡುಗೆ ಮಾಡಿ ಮಾವನಿಗೂ ಬಡಿಸಿ ತಿನ್ನುತ್ತಾಳೆ. ಅಡುಗೆಯಲ್ಲಿ ಉಪ್ಪಿಲ್ಲ ಎಂದರೂ ಒಂದೂ ಮಾತನಾಡದೇ ತಿನ್ನುತ್ತಾರೆ ಪದ್ಮನಾಭ. ಶ್ರಾವಣಿ ಪಾಡು ನೋಡಲು ಸಾಧ್ಯವಾಗದ ಅವರು ಎಷ್ಟೇ ಕಷ್ಟ ಬಂದರೂ ಶ್ರಾವಣಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಪಣತೊಡುತ್ತಾರೆ.

ಯಜಮಾನರ ಮನೆಯಿಂದ ಮರಳಿ ಬಂದ ಸುಬ್ಬುಗೆ ನೀರು ಕೊಡುತ್ತಾಳೆ ಶ್ರಾವಣಿ. ಅವಳನ್ನು ಧಿಕ್ಕರಿಸಿ ಕೋಣೆಗೆ ಹೋದ್ರೆ ಅಲ್ಲಿಗೂ ಹಿಂಬಾಲಿಸುತ್ತಾಳೆ ಆಕೆ. ಅವಳನ್ನು ನೋಡಿ 'ಮೇಡಂ, ನಾನು ಡ್ರೆಸ್ ಚೇಂಜ್ ಮಾಡಬೇಕು ಇಲ್ಲಿಂದ ಹೋಗಿ' ಎನ್ನುತ್ತಾನೆ. ಅದಕ್ಕೆ ಶ್ರಾವಣಿ 'ನಾನು ಇಲ್ಲಿಂದ ಹೋಗೋಕೆ ಬಂದಿಲ್ಲ, ಇಲ್ಲೇ ಇರಲು ಬಂದಿರೋದು' ಎಂದು ಹೇಳುತ್ತಾಳೆ. ಅವಳ ಮಾತು ಕೇಳಿ ಸುಬ್ಬುಗೆ ಕೋಪ ಉಕ್ಕಿ ಬರುತ್ತದೆ. 'ಮೇಡಂ ದಯವಿಟ್ಟು ಇಲ್ಲಿಂದ ಹೋಗಿ, ನಿಮ್ಮ ಮಾತು ಕೇಳಿದ್ರೆ ನಂಗೆ ಮೈಯೆಲ್ಲಾ ಉರಿಯುತ್ತೆ...