Bengaluru, ಮಾರ್ಚ್ 13 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಬುಧವಾರ ಮಾರ್ಚ್ 12ರ ಸಂಚಿಕೆಯಲ್ಲಿ ಜಾಹ್ನವಿ ಮನೆಯಲ್ಲಿ ಎಲ್ಲ ರೂಮ್‌ಗಳಲ್ಲೂ ಹುಡುಕಾಟ ನಡೆಸಿದ್ದಾಳೆ. ಆದರೆ ಹಾಲ್‌ನಲ್ಲಿ ಆಗಲಿ, ಸಂತೋಷ್ ಮತ್ತು ಹರೀಶ್‌ ರೂಮಿನಲ್ಲಾಗಲೀ ಕ್ಯಾಮೆರಾ ಪತ್ತೆಯಾಗಿಲ್ಲ. ಅದಾದ ಬಳಿಕ ಅವಳು ನೇರವಾಗಿ ಅಜ್ಜಿಯ ರೂಮ್‌ಗೆ ತೆರಳಿದ್ದಾಳೆ. ಅಲ್ಲಿಯೂ ಬಹಳ ಹೊತ್ತು ಹುಡುಕಾಡಿದ ನಂತರ ಅವಳಿಗೆ ಹೂವಿನ ಗುಚ್ಛದಲ್ಲಿ ಜಯಂತ್ ಇರಿಸಿರುವ ರಹಸ್ಯ ಕ್ಯಾಮೆರಾ ಪತ್ತೆಯಾಗಿದೆ. ಅವಳು ಅಂದುಕೊಂಡಂತೆಯೇ ಆಗಿದೆ, ಹೀಗಾಗಿ ಅವಳು ಕೂಡಲೇ ಕ್ಯಾಮೆರಾ ತೆಗೆದು ಅಲ್ಲಿಂದ ಎಸೆದಿದ್ದಾಳೆ.

ಜಾಹ್ನವಿ ತವರು ಮನೆಗೆ ಹೋದ ಬಳಿಕ ಜಯಂತ್‌ಗೆ ಒಂದೆಡೆ ಸಂಶಯ ಆರಂಭವಾಗಿದೆ, ಮತ್ತೊಂದೆಡೆ ಮನಸ್ಸಿನಲ್ಲೇ ಅವನು ಬಗೆ ಬಗೆ ಯೋಚನೆ ಮಾಡುತ್ತಿದ್ದಾನೆ. ಅಲ್ಲದೇ, ಜಾಹ್ನವಿ ಮನೆಯಲ್ಲಿ ಎಲ್ಲ ವಿಚಾರ ಹೇಳಿರಬಹುದೇ ಎಂಬ ಸಂಶಯ ಅವನಿಗೆ ಬಂದಿದೆ. ಹೀಗಾಗಿ ಜಾಹ್ನವಿಯನ್ನು ಅಲ್ಲಿಂದ ಮನೆಗೆ ಕರೆದುಕೊಂಡು ಬರುವ ಬಗ್ಗೆ ಚಿಂತಿಸಿದ್ದಾನೆ. ನಂತರ ಜಾಹ್ನವಿ ಮನ...