Bengaluru, ಮಾರ್ಚ್ 20 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಬುಧವಾರ ಮಾರ್ಚ್ 19ರ ಸಂಚಿಕೆಯಲ್ಲಿ ಭಾವನಾ ಮತ್ತು ಸಿದ್ದೇಗೌಡ್ರು, ಜಾಹ್ನವಿ ಮನೆಯಲ್ಲಿ ಇದ್ದಾರೆ. ಭಾವನಾ, ಜಾಹ್ನವಿ ಜೊತೆಯೇ ಮಲಗಿದ್ದಾಳೆ. ಬೆಳಗೆದ್ದು ಜಾಹ್ನವಿ ಪಕ್ಕದಲ್ಲಿ ಭಾವನಾ ಇರುವುದನ್ನು ಕಂಡು, ಅವಳು ತುಂಬಾ ಖುಷಿಪಡುತ್ತಾಳೆ. ಭಾವನಾ ಜೊತೆ ಜಾಹ್ನವಿ ಮನಸ್ಸು ಬಿಚ್ಚಿ ಮಾತನಾಡಿ ಹಗುರಾಗುತ್ತಾಳೆ. ಹೊರಗಡೆ ಜಯಂತ್ ಮತ್ತು ಸಿದ್ದೇಗೌಡ್ರು ಮಾತನಾಡುತ್ತಾ ಕುಳಿತಿದ್ದಾರೆ. ಅವರಿಬ್ಬರೂ ಮಾತನಾಡುತ್ತಿರುವಾಗ, ಇವರ ನೆಪದಲ್ಲಿ ಅಜ್ಜಿಯನ್ನು ನೋಡಲು ಜಯಂತ್ ಪ್ಲ್ಯಾನ್ ಮಾಡುತ್ತಾನೆ. ಜಾಹ್ನವಿ ಮತ್ತು ಭಾವನಾ ಮಾತನಾಡುತ್ತಾ ಇರುತ್ತಾರೆ, ನಾವು ಇಬ್ಬರೇ ಮೆಲ್ಲನೇ ಹೋಗಿ ಅಜ್ಜಿಯನ್ನು ನೋಡಿಕೊಂಡು ಬರಬಹುದು ಎಂದು ಯೋಚಿಸುತ್ತಾನೆ. ಅದನ್ನು ಸಿದ್ದೇಗೌಡ್ರ ಬಳಿ ಜಯಂತ್ ಹೇಳುತ್ತಾನೆ.

ಜಯಂತ್ ಮಾತನ್ನು ಕೇಳಿದ ಸಿದ್ದೇಗೌಡ್ರು, ಅಯ್ಯೋ, ಅಜ್ಜಿಯನ್ನು ನೋಡಲು ಹೋಗುವುದು ಎಂದರೆ ನನಗೂ ಇಷ್ಟವೇ. ಆದರೆ ನಾವಿಬ್ಬರೇ ಹೋಗುವುದು ತಪ್ಪಾಗುತ್ತದೆ....