Bengaluru, ಮಾರ್ಚ್ 15 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶುಕ್ರವಾರ ಮಾರ್ಚ್ 14ರ ಸಂಚಿಕೆಯಲ್ಲಿ ಅಜ್ಜಿ ಕೋಮಾದಿಂದ ಹೊರಬರುವ ಸೂಚನೆ ನೀಡಿದ್ದಾರೆ. ಅಲ್ಲದೆ, ವೈದ್ಯರು ಬಂದು ಪರಿಶೀಲಿಸಿದಾಗ, ಅಜ್ಜಿ, ಸ್ವಲ್ಪ ಸ್ವಲ್ವವೇ ಸ್ಪಂದಿಸಿದ್ದಾರೆ. ಕೋಮಾದಲ್ಲಿದ್ದರೂ, ಜಾಹ್ನವಿಯ ಗಂಡ ಜಯಂತ್ ಹೆಸರನ್ನು ಪದೇ ಪದೇ ಉಲ್ಲೇಖಿಸಿದ್ದಾರೆ. ಜಯಂತಾ.. ಜಯಂತಾ... ಎಂದು ಕೂಗಿ ಕರೆದಿದ್ದಾರೆ. ಅದನ್ನು ಕೇಳಿ ಮನೆಯವರಿಗೆ ಖುಷಿಯಾಗಿದೆ. ಅಜ್ಜಿ ಕೊನೆಗೂ ಸ್ಪಂದಿಸುತ್ತಿದ್ದಾರೆ. ನಮ್ಮ ಮೊರೆ ಅವರಿಗೆ ಕೇಳಿಸುತ್ತಿದೆ. ನಮ್ಮ ಪ್ರಾರ್ಥನೆ ಕೊನೆಗೂ ಫಲಿಸಿತು ಎಂದು ಸಂಭ್ರಮಿಸುತ್ತಿದ್ದಾರೆ. ಆದರೆ ಅಜ್ಜಿ ಎಚ್ಚರಗೊಂಡರೆ ತನಗೆ ಖಂಡಿತಾ ಅಪಾಯ ಎನ್ನುವುದು ಜಯಂತ್‌ಗೆ ತಿಳಿದಿದೆ. ಹೀಗಾಗಿ ಅವನೊಬ್ಬನನ್ನು ಬಿಟ್ಟು, ಉಳಿದವರೆಲ್ಲರೂ ಅಜ್ಜಿ ಹುಷಾರಾಗಿ ಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

ಅಜ್ಜಿ ಕೋಮಾದಲ್ಲಿ ಪ್ರತಿಕ್ರಿಯೆ ನೀಡಿರುವುದು ಮತ್ತು ವೈದ್ಯರು ಬಂದು ಪರಿಶೀಲಿಸಿರುವುದನ್ನು ವೀಣಾ, ಜಾಹ್ನವಿಗೆ ಕರೆ ಮಾಡಿ ತಿಳ...