Bengaluru, ಮಾರ್ಚ್ 19 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಮಂಗಳವಾರ ಮಾರ್ಚ್ 18ರ ಸಂಚಿಕೆಯಲ್ಲಿ ಜಯಂತ ಮನೆಗೆ ವೈದ್ಯರನ್ನು ಕರೆಸಿದ್ದಾನೆ. ಜಾಹ್ನವಿ ಮನೆಯಲ್ಲಿ ಒಟ್ಟಾರೆಯಾಗಿ ಹೇಗೇಗೋ ಮಾತನಾಡುತ್ತಾಳೆ. ಅವಳ ನಡೆ, ನುಡಿ ಸರಿಯಿಲ್ಲ ಎಂದು ವೈದ್ಯರಲ್ಲಿ ದೂರುತ್ತಾನೆ. ಆಗ ಜಾಹ್ನವಿ, ವೈದ್ಯರ ಬಳಿ, ನನಗೇನೂ ಆಗಿಲ್ಲ, ನಾನು ಆರಾಮವಾಗಿದ್ದೇನೆ ಎನ್ನುತ್ತಾಳೆ. ಜಾಹ್ನವಿಯ ಮಾತು ಕೇಳಿದ ವೈದ್ಯರು, ನೀವು ಹೆಚ್ಚು ಚಿಂತೆ ಮಾಡುವುದು ಬೇಡ, ಮನಸ್ಸನ್ನು ಆದಷ್ಟು ಶಾಂತವಾಗಿರಿಸಿ, ಜತೆಗೆ ಸಾಕಷ್ಟು ನಿದ್ರೆ ಮಾಡಿ, ಯೋಗ, ಧ್ಯಾನ ಮಾಡಿ ಎನ್ನುತ್ತಾರೆ. ಅದಕ್ಕೆ ಜಾಹ್ನವಿ, ನನಗೆ ಯಾವುದರಲ್ಲೂ ಆಸಕ್ತಿಯಿಲ್ಲ ಎನ್ನುತ್ತಾಳೆ. ವೈದ್ಯರು ಅವಳಿಗೆ ಸಮಾಧಾನ ಮಾಡಿ ಹೊರಗಡೆ ಬರುತ್ತಾರೆ. ನಂತರ ಜಯಂತ್ ಬಳಿ, ಅವಳಿಗೆ ಮಾತ್ರೆ ಬರೆದು ಕೊಡುತ್ತಾರೆ. ತುಂಬಾ ಕಿರಿಕಿರಿ ಮಾಡಿದರೆ ಈ ಮಾತ್ರೆ ಕೊಡಿ, ಅವರು ಚೆನ್ನಾಗಿ ನಿದ್ರೆ ಮಾಡುತ್ತಾರೆ, ಆದರೆ ದಿನವೂ ಕೊಡಬೇಡಿ ಎಂದು ಎಚ್ಚರಿಸುತ್ತಾರೆ.

ಇತ್ತ ಮನೆಯಲ್ಲಿ ಅಜ್ಜಿ ಟ್ರ...