ಭಾರತ, ಏಪ್ರಿಲ್ 27 -- ಕೋರ್ಟ್‌, ಕ್ರೈಮ್‌ ಕಥಾಹಿನ್ನೆಲೆಯ ಸಿನಿಮಾಗಳು ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಬಿಡುಗಡೆಯಾಗಿವೆ. ಆದರೆ ಈ ಹಿನ್ನೆಲೆಯ ಎಲ್ಲಾ ಸಿನಿಮಾಗಳು ಯಶಸ್ಸು ಕಂಡಿಲ್ಲ. ಇತ್ತೀಚೆಗೆ ಕೋರ್ಟ್ ರೂಮ್ ಕಥಾಹಂದರದ ಸಿನಿಮಾಗಳು ಹೆಚ್ಚು ಬಿಡುಗಡೆಯಾಗುತ್ತಿವೆ. ಮಾತ್ರವಲ್ಲ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿವೆ. ಕನ್ನಡ ಯುದ್ಧಕಾಂಡ ಸೇರಿ ಭಾರತದ ಬೆಸ್ಟ್ ಕೋರ್ಟ್ ರೂಮ್ ಡ್ರಾಮಾಗಳು ಯಾವುವು ನೋಡಿ.

2022 ರಲ್ಲಿ ಬಿಡುಗಡೆಯಾದ ಮಲಯಾಳಂ ಚಿತ್ರವಿದು. ಈ ಲೀಗಲ್ ಥ್ರಿಲ್ಲರ್ ಚಿತ್ರಕ್ಕೆ ಡಿಜೊ ಜೋಸ್ ಆಂಥನಿ ನಿರ್ದೇಶನವಿದೆ. ಪ್ರಥ್ವಿರಾಜ್ ಸುಕುಮಾರನ್‌, ಸೂರಜ್ ವೆಂಜರಮೂಡು ಮುಖ್ಯಭೂಮಿಕೆಯಲ್ಲಿ ನಟಿಸಿರುವ ಚಿತ್ರವಿದು. ಕಾಲೇಜು ಪ್ರಾಧ್ಯಪಕರ ಕೊಲೆಯ ನಂತರ ಏನೇನು ನಡೆಯುತ್ತದೆ ಎಂಬುದು ಈ ಚಿತ್ರದಲ್ಲಿ ಅಡಕವಾಗಿದೆ.

2023ರಲ್ಲಿ ಬಿಡುಗಡೆಯಾದ, ಅಕ್ಷಯ್ ಕುಮಾರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಹಿಂದಿ ಚಿತ್ರವಿದು. 2012ರಲ್ಲಿ ಬಿಡುಗಡೆಯಾದ ಓಹ್ ಮೈ ಗಾಡ್ ಚಿತ್ರದ ಮುಂದುವರಿದ ಭಾಗವಿದು. ಅಮಿತ್ ರೈ ಈ ಚಿ...