ಭಾರತ, ಏಪ್ರಿಲ್ 10 -- Good Bad Ugly Twitter Review: ಥಾಲ ಅಜಿತ್‌ ಕುಮಾರ್ ನಟನೆಯ ಗುಡ್ ಬ್ಯಾಡ್ ಅಗ್ಲಿ ಇಂದು (ಏಪ್ರಿಲ್‌ 10) ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ. ಅಧಿಕ್ ರವಿಚಂದ್ರನ್ ನಿರ್ದೇಶನದ ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದಾರೆ. ಇದೊಂದು ಆ್ಯಕ್ಷನ್ ಸಿನಿಮಾವಾಗಿದೆ. ಅಜಿತ್ 2 ವರ್ಷಗಳ ನಂತರ ಮತ್ತೆ ತೆರೆ ಮೇಲೆ ಕಾಣಿಸಿದ್ದು, ಸಿನಿಮಾದ ಬಗ್ಗೆ ಥಾಲ ಅಭಿಮಾನಿಗಳಲ್ಲಿ ನಿರೀಕ್ಷೆ ಕೊಂಚ ಹೆಚ್ಚೇ ಇತ್ತು ಎನ್ನಬಹುದು.

ಅಜಿತ್‌ ಜೊತೆ ತ್ರಿಶಾ ಕೃಷ್ಣನ್‌, ಅರ್ಜುನ್ ದಾಸ್, ಸುನೀಲ್, ಜಾಕಿ ಶ್ರಾಫ್, ಸಯಾಜಿ ಶಿಂಧೆ, ಟಿನ್ನು ಆನಂದ್, ಪ್ರಿಯಾ ಪ್ರಕಾಶ್ ವಾರಿಯರ್, ಪ್ರಭು, ಪ್ರಸನ್ನ, ಯೋಗಿ ಬಾಬು, ರಘು ರಾಮ್, ರೆಡಿನ್ ಕಿಂಗ್ಸ್ಲಿ, ರಾಹುಲ್ ದೇವ್, ಉಷಾ ಉತ್ತುಪ್ ಮತ್ತು ಶೈನ್ ಟಾಮ್ ಚಾಕ್‌ಕೋ ಮೊದಲಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಈಗಾಗಲೇ ಸಿನಿಮಾ ಬಿಡುಗಡೆಯಾಗಿದ್ದು, ಚಿತ್ರಮಂದಿರದಲ್ಲಿರುವ ಪ್ರೇಕ್ಷಕರು ಎಕ್ಸ್‌ (ಹಿಂದಿನ ಟ್ವಿಟರ್‌) ನಲ್ಲಿ ರಿವ್ಯೂಗಳ...