Bengaluru, ಮೇ 18 -- ಮೈಸೂರು: ಅಗ್ನಿ ಅವಘಡದಿಂದ ಸಂಪೂರ್ಣವಾಗಿ ಮನೆಗಳು ಸುಟ್ಟು ಹೋಗಿದ್ದ ಮೂವರು ಕುಟುಂಬದವರಿಗೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ. ಟಿ. ದೇವೇಗೌಡ ಅವರು ಶನಿವಾರೇ ಗೌಡ, ವೆಂಕಟೇಶ್ ಗೌಡ,ಶ್ರೀನಿವಾಸ್ ಗೌಡ ಅವರಿಗೆ ವೈಯಕ್ತಿಕವಾಗಿ ಒಂದು ಲಕ್ಷ ರೂಪಾಯಿ ಪರಿಹಾರವನ್ನು ವಿತರಿಸಿದರು. ಮೈಸೂರು ತಾಲ್ಲೂಕಿನ ಬೋರೆ ಆನಂದೂರು ಗ್ರಾಮಕ್ಕೆ ಭಾನುವಾರ ಭೇಟಿ ನೀಡಿ ಮನೆಯನ್ನು ಕಳೆದುಕೊಂಡ ಮೂವರು ಕುಟುಂಬದವರ ಜೊತೆ ಸಮಾಲೋಚನೆ ನಡೆಸಿದರಲ್ಲದೆ, ಧೈರ್ಯ ತುಂಬಿದರು.

ಆಕಸ್ಮಿಕವಾಗಿ ನಡೆದಿರುವ ಘಟನೆಯಿಂದ ಮನೆಯಲ್ಲಿ ಒಂದು ವಸ್ತುಗಳು ಇಲ್ಲದಂತೆ ಸುಟ್ಟು ಹೋಗಿದೆ. ನಮಗೆ ಆಹಾರ ಪದಾರ್ಥಗಳು ಇಲ್ಲದಂತಾಗಿದೆ ಎಂದು ಅಳಲು ತೋಡಿಕೊಂಡರು. ಈ ವೇಳೆ ಎಲ್ಲರಿಗೂ ಭರವಸೆ ಮಾತುಗಳನ್ನಾಡಿ ವೈಯಕ್ತಿಕವಾಗಿ ‌ಮೂವರು ಕುಟುಂಬದವರಿಗೆ ತಲಾ ಒಂದು ಲಕ್ಷ ರೂ.ಪರಿಹಾರದ ಹಣವನ್ನು ವಿತರಿಸಿದರು. ಕಂದಾಯ,ವಿದ್ಯುತ್ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ವರದಿ ಕೊಡಲಿದ್ದಾರೆ. ಸರ್ಕಾರದ ವತಿಯಿಂದ ಬೇಗನೆ ಪರಿಹಾರ ಕೊಡಿಸಲಾಗುವುದು, ಗ್ರಾಮದವರು...