Bengaluru, ಏಪ್ರಿಲ್ 24 -- ಆರೋಗ್ಯಕರ ಜೀವನಶೈಲಿಗೆ ಪೂರಕವಾದ ಆಹಾರ ಪದಾರ್ಥಗಳ ಬಗ್ಗೆ ಜನರ ಆಸಕ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹಣ್ಣಿನ ಬೀಜಗಳು, ಹರ್ಬಲ್ ಟೀ, ಸೊಪ್ಪು ತರಕಾರಿಗಳನ್ನು ಜನರು ತಮ್ಮ ಆಹಾರದಲ್ಲಿ ಹೆಚ್ಚಾಗಿ ಬಳಸುತ್ತಿದ್ದಾರೆ. ಅದರಲ್ಲೂ ಪ್ರಾಚೀನ ಕಾಲದಿಂದಲೇ ಆಯುರ್ವೇದದಲ್ಲಿ ಪ್ರಾಮುಖ್ಯತೆ ಪಡೆದಿರುವ ಅಗಸೆ ಬೀಜಗಳು (Flax Seeds) ಮತ್ತೆ ಜನಪ್ರಿಯವಾಗಿವೆ. ಪುಟಾಣಿ ಗಾತ್ರದ ಈ ಬೀಜಗಳು ಅಪಾರ ಪೋಷಕಾಂಶಗಳಿಂದ ಕೂಡಿದ್ದು, ದೈಹಿಕ ಆರೋಗ್ಯವನ್ನು ಸುಧಾರಿಸಲು ಸಹಕಾರಿಯಾಗುತ್ತವೆ. ಹೃದಯದ ಆರೋಗ್ಯದಿಂದ ಹಿಡಿದು ತ್ವಚೆ ಮತ್ತು ಕೂದಲಿನ ಆರೋಗ್ಯದವರೆಗೆ ಅಗಸೆ ಬೀಜಗಳ ಪ್ರಯೋಜನಗಳು ಅನೇಕ.

ಅಗಸೆ ಬೀಜಗಳ ಪೋಷಕತತ್ವ, ಆರೋಗ್ಯ ಲಾಭಗಳು ಹಾಗೂ ಬಳಸುವ ಸರಿಯಾದ ವಿಧಾನಗಳ ಬಗ್ಗೆ ವಿವರವಾಗಿ ತಿಳಿಯಿರಿ.

ಅಗಸೆ ಬೀಜಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ತುಂಬಿವೆ. ಇವು ಹೃದಯದ ಕೆಲಸವನ್ನು ಸುಧಾರಿಸುತ್ತವೆ ಹಾಗೂ ಕೆಟ್ಟ ಕೊಲೆಸ್ಟೆರಾಲ್‌ ಅನ್ನು ಕಡಿಮೆ ಮಾಡುತ್ತವೆ.

ನ್ಯೂಟ್ರಿಯಂಟ್‌ಗಳಿಂದ ಸಮೃದ್ಧವಾಗಿದ್ದು, ನರವ...