ಭಾರತ, ಏಪ್ರಿಲ್ 7 -- ಮೈಸೂರು: ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಿಜೆಪಿ ವಿರೋಧ ವ್ಯಕ್ತವಾಗಿದೆ. ರಾಜ್ಯ ಸರ್ಕಾರದ ವಿರುದ್ದ ಜನಾಕ್ರೋಶ ಯಾತ್ರೆಗೆ ಬಿಜೆಪಿ ಮುಂದಾಗಿದೆ. ಜನಾಕ್ರೋಶ ಹೋರಾಟದ ಯಾತ್ರೆಗೆ ಇಂದು ಚಾಲನೆ ದೊರೆತಿದೆ. ಮೈಸೂರಿನಿಂದಲೇ ಚಾಲನೆ ದೊರೆತಿದ್ದು, ಇಂದಿನಿಂದ ಮೇ 3 ವರೆಗೆ ರಾಜ್ಯಾದ್ಯಂತ ಜನಾಕ್ರೋಶ ಯಾತ್ರೆ ಸಾಗಲಿದೆ. ಒಟ್ಟು ನಾಲ್ಕು ಹಂತದಲ್ಲಿ ಜನಾಕ್ರೋಶ ಯಾತ್ರೆ ರಾಜ್ಯಾದ್ಯಂತ ಸಂಚಾರ ಆರಂಭಿಸಿದೆ.

ಏಪ್ರಿಲ್ 7 ರಿಂದ 12 ರವರಗೆ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಕೊಡುಗು, ಚಿಕ್ಕಮಗಳೂರು, ಮಂಗಳೂರು, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಮೂಲಕ ಸಾಗಲಿರುವ ಮೊದಲ ಹಂತದ ಯಾತ್ರೆಯಾಗಲಿದೆ.

ಏಪ್ರಿಲ್ 15 ರಿಂದ ಉತ್ತರ ಕರ್ನಾಟಕ ಭಾಗದಲ್ಲಿ ಎರಡನೇ ಹಂತದ ಯಾತ್ರೆ ನಡೆಯಲಿದೆ. ಏಪ್ರಿಲ್ 15 ರಿಂದ 18 ರವರೆಗೆ ನಿಪ್ಪಾಣಿ, ಬೆಳಗಾವಿ, ಹುಬ್ಬಳ್ಳಿ, ಬಾಗಲಕೋಟೆ, ವಿಜಯಪುರ, ಕಲಬುರಗಿ ಮತ್ತು ಬೀದರ್ ಭಾಗದಲ್ಲಿ ಜನಾಕ್ರೋಶ ಯಾತ್ರೆ ಸಾಗಲಿದೆ. ಮೂರನೇ ಹಂತದಲ್ಲಿ ಏಪ್ರಿಲ್ 21 ರ...