ಭಾರತ, ಫೆಬ್ರವರಿ 21 -- ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ತನ್ನ ಆರಂಭಿಕ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಟೀಮ್ ಇಂಡಿಯಾ 6 ವಿಕೆಟ್​ಗಳ ಭರ್ಜರಿ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಮೊಹಮ್ಮದ್ ಶಮಿ ಪರಿಣಾಮಕಾರಿ ಬೌಲಿಂಗ್ ಪ್ರದರ್ಶನ, ಶುಭ್ಮನ್ ಗಿಲ್ ಅವರ ಅಜೇಯ ಶತಕವು ಭಾರತ ಜಯಭೇರಿ ಬಾರಿಸಲು ಕಾರಣವಾಯಿತು. ಅದ್ಭುತ ಲಯದಲ್ಲಿರುವ ಆಟಗಾರರು, ಮುಂದಿನ ಪಂದ್ಯಗಳಲ್ಲೂ ಇದೇ ಪ್ರದರ್ಶನ ನೀಡುವ ಆತ್ಮವಿಶ್ವಾಸದಲ್ಲಿದ್ದಾರೆ. ಗೆಲುವು, ಆಟಗಾರರ ಪ್ರದರ್ಶನ ಇದೆಲ್ಲವೂ ಓಕೆ, ಆದರೆ ಅಕ್ಷರ್​ ಪಟೇಲ್​ಗೆ ಮತ್ತೆ ಬಡ್ತಿ ನೀಡಿ, ಕೆಎಲ್ ರಾಹುಲ್​ಗೆ ಅನ್ಯಾಯ ಮಾಡ್ತಿರೋದೇಕೆ? ಇದು ಸದ್ಯ ಕ್ರಿಕೆಟ್​​ ವಲಯದಲ್ಲಿ ಗಂಭೀರವಾಗಿ ಚರ್ಚೆಯಾಗುತ್ತಿರುವ ವಿಷಯ.

ಬಾಂಗ್ಲಾದೇಶ ವಿರುದ್ಧ ಕೆಎಲ್ ರಾಹುಲ್ 6ನೇ ಸ್ಥಾನದಲ್ಲಿ ಬ್ಯಾಟ್ ಬೀಸಿ ಉತ್ತಮ ಪ್ರದರ್ಶನ ತೋರಿದರು. ಸೆಂಚುರಿ ಸ್ಟಾರ್ ಶುಭ್ಮನ್ ಗಿಲ್ ಜೊತೆಗೂಡಿ 5ನೇ ವಿಕೆಟ್​ಗೆ ಅಜೇಯ 87 ರನ್​ಗಳ ಪಾಲುದಾರಿಕೆ ಒದಗಿಸಿದ್ದು ತಂಡವು ಗೆಲುವಿನ ಗಡಿ ದಾಟಲು ಸಾಧ್ಯವಾಯಿತು. ಇದರಲ್ಲಿ ರಾಹುಲ್ ಪಾಲ...