Bengaluru, ಏಪ್ರಿಲ್ 22 -- ಇಂದಿನ ದಿನಗಳಲ್ಲಿ ಅಕ್ಷಯತದಿಗೆ ಎಂಬ ಹೆಸರಾಗಿದೆ. ಆದರೆ ಇದರ ನಿಜವಾದ ಉಚ್ಚಾರಣೆ ಎಂದರೆ ಅಕ್ಷತದಿಗೆ ಅಥವ ಅಕ್ಷತೃತೀಯ. 2025ರಲ್ಲಿ ಏಪ್ರಿಲ್ 30ರ ಬುಧವಾರ ಅಕ್ಷತೃತೀಯ ಹಬ್ಬವನ್ನು ಆಚರಿಸಲಾಗುತ್ತದೆ. ಉದಯದಲ್ಲಿ ತದಿಗೆ ಇರುವ ಕಾರಣ ಇದೇ ದಿನ ಈ ಹಬ್ಬವನ್ನು ಆಚರಿಸಬೇಕು. ಕೇವಲ ಚಿನ್ನ ಮತ್ತು ಬೆಳ್ಳಿಯನ್ನು ಕೊಂಡಲ್ಲಿ ಈ ಹಬ್ಬವು ಪೂರ್ಣಗೊಳ್ಳುವುದಿಲ್ಲ. ಇದು ಧರ್ಮ ಮತ್ತು ಕರ್ಮಕ್ಕೆ ಸಂಬಂಧಿಸಿದೆ. ಅಂದರೆ ಮಾಡುವ ಧಾರ್ಮಿಕ ಕೆಲಸ ಕಾರ್ಯಗಳು ಮತ್ತು ತತ್ಸಂಭಿತ ಧಾನಗಳಿಂದ ಶುಭ ಫಲಗಳನ್ನು ಪಡೆಯಲಾಗುತ್ತದೆ. ದಕ್ಷಿಣಭಾರತದಲ್ಲಿ ಈ ಹಬ್ಬವು ಹೆಣ್ಣುಮಕ್ಕಳಿಗೆ ವಿಶೇಷವಾಗಿದೆ.

ಕುಲದೇವರ ಪವಿತ್ರ ಸ್ಥಳಕ್ಕೆ ಭೇಟಿ ನೀಡಿ ಪೂಜೆಯನ್ನು ಸಲ್ಲಿಸಿದರೆ, ದೊರೆಯುವ ಶುಭಫಲಗಳು ದುಪ್ಪಟ್ಟಾಗುತ್ತದೆ. ಮನೆಯಲ್ಲಿ ಮಾಡುವ ಪೂಜೆಯೂ ಹೆಚ್ಚು ಫಲಪ್ರದವಾಗಿರುತ್ತದೆ. ಸಾಮಾನ್ಯವಾಗಿ ಕುಬೇರ ಲಕ್ಷ್ಮಿ ಪೂಜೆಯನ್ನು ಮಾಡಲಾಗುತ್ತದೆ. ಆದರೆ ಈ ದಿನದಂದು ಲಕ್ಷ್ಮಿ ಸಮೇತ ಭಗವಾನ್ ಶ್ರೀ ವಿಷ್ಣುವಿನ ಪೂಜೆಯನ್ನು ಮಾಡಬೇಕು. ಆನಂ...