ಭಾರತ, ಏಪ್ರಿಲ್ 28 -- ಭಾರತದಲ್ಲಿ ಯಾವುದೇ ಹಬ್ಬದ ದಿನಗಳು, ಶುಭ ದಿನಗಳಲ್ಲಿ ಮನೆಯ ಮುಂದೆ ರಂಗೋಲಿ ಹಾಕುವ ರೂಢಿ ಇದೆ. ಇದನ್ನು ಶುಭ ಎಂದು ಪರಿಗಣಿಸಲಾಗುತ್ತದೆ. ಅಕ್ಷಯ ತೃತೀಯ ಕೂಡ ಭಾರತದಲ್ಲಿ ಬಹಳ ವಿಶೇಷ. ಏಪ್ರಿಲ್ 30 ರಂದು ಅಕ್ಷಯ ತೃತೀಯವಿದ್ದು ಈ ದಿನ ವಿಷ್ಣು ಹಾಗೂ ಲಕ್ಷ್ಮೀದೇವಿಯ ಥೀಮ್‌ನಲ್ಲಿ ರಂಗೋಲಿ ಬಿಡಿಸಿ. ಅಕ್ಷಯ ತೃತೀಯದಂದು ಲಕ್ಷ್ಮೀ ಮತ್ತು ವಿಷ್ಣುವನ್ನು ಪೂಜಿಸುವುದರಿಂದ ವರ್ಷವಿಡೀ ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ ಎಂದು ನಂಬಲಾಗಿದೆ. ಅಕ್ಷಯ ತೃತೀಯಕ್ಕೆ ಹೊಂದುವ ರಂಗೋಲಿ ವಿನ್ಯಾಸಗಳು ಇಲ್ಲಿವೆ.

ನಿಮಗೆ ಸಮಯದ ಅಭಾವವಿದ್ದೂ, ಆಕರ್ಷಕ ರಂಗೋಲಿ ಬಿಡಿಸಲು ಪ್ರಯತ್ನ ಮಾಡುತ್ತಿದ್ದರೆ ನೀವು ಈ ರೀತಿ ಅಕ್ಷಯ ತೃತೀಯ ಎಂದು ನಿಮಗೆ ಬೇಕಾದ ಭಾಷೆಯಲ್ಲಿ ಬರೆದು ರಂಗೋಲಿ ಚಿತ್ತಾರ ಮೂಡಿಸಬಹುದು. ಈ ರಂಗೋಲಿ ವಿನ್ಯಾಸಕ್ಕೆ ಪೋರ್ಕ್, ಚಮಚಗಳನ್ನು ಬಳಸಬಹುದು.

ಅಕ್ಷಯ ತೃತೀಯದಂದು ಮನೆಯ ಮುಖ್ಯದ್ವಾರದ ಎದುರು ಲಕ್ಷ್ಮೀ ಹಾಗೂ ವಿಷ್ಣುವಿನ ಚಿತ್ರ ಇರುವ ಈ ರೀತಿಯ ರಂಗೋಲಿಯನ್ನು ಬಿಡಿಸಿ. ಕೆಂಪು, ಹಳದಿ ಮತ್ತು ಹಸಿರು ...