ಭಾರತ, ಏಪ್ರಿಲ್ 27 -- ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ಅಕ್ಷಯ ತೃತೀಯ ದಿನದಂದು ಚಿನ್ನಾಭರಣ ಖರೀದಿಸುವುದು ಹೊಸ ಟ್ರೆಂಡ್ ಆಗಿದೆ. ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಈ ಶುಭದಿನವು ಹೆಚ್ಚು ಆಪ್ತ ಎನಿಸಿದ್ದು, ಒಂದೆರಡು ಗ್ರಾಂ ಚಿನ್ನವನ್ನಾದರೂ ಖರೀದಿ ಮಾಡಲೇಬೇಕು ಎನ್ನುವುದು ಅವರ ಆಸೆ, ಬಯಕೆ. ಈ ಹಿನ್ನೆಲೆ ಚಿನ್ನಾಭರಣಗಳ ಮಳಿಗೆಗಳ ಮುಂದೆ ಜನಸ್ತೋಮ ನೆರೆದಿರುತ್ತದೆ. ಈ ವರ್ಷ ಅದರ ದುಪ್ಪಟ್ಟಾಗುವ ನಿರೀಕ್ಷೆಯಿದೆ. ಅದಕ್ಕಾಗಿ ವ್ಯಾಪಾರಿಗಳೂ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ.

2025ರ ಸಾಲಿನಲ್ಲಿ ಏಪ್ರಿಲ್ 30ರಂದು ಅಕ್ಷಯ ತೃತೀಯ ಇದ್ದು, ಹೆಚ್ಚು ಬೆಲೆಬಾಳುವ ನಿರ್ಜೀವ ಹಳದಿ ಲೋಹದ ಖರೀದಿಗೆ ಆಭರಣ ಪ್ರಿಯರು ಸಜ್ಜಾಗಿದ್ದಾರೆ. ಆಭರಣ ವ್ಯಾಪಾರಿಗಳು ಗ್ರಾಹಕರಿಗೆ ವಿನೂತನ ಆಭರಣ ವಿನ್ಯಾಸಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಜೊತೆಗೆ ಹಲವಾರು ರಿಯಾಯಿತಿಗಳನ್ನೂ ಘೋಷಿಸುತ್ತಿದ್ದಾರೆ. ನಿರೀಕ್ಷಿತ ಜನದಟ್ಟಣೆ ನಿಯಂತ್ರಿಸಲು ಅಕ್ಷಯ ತೃತೀಯ ದಿನದಂದು ಅನೇಕ ಶೋರೂಮ್​ಗಳು, ಮಳಿಗೆಗಳು ಬೆಳಿಗ್ಗೆ 7 ಗಂಟೆಯಿಂದಲೇ ತೆರೆಯುತ್ತವೆ ...