Bengaluru, ಏಪ್ರಿಲ್ 3 -- Kesari Chapter 2 Trailer: ಬಾಲಿವುಡ್ ಚಿತ್ರರಂಗದಲ್ಲಿ ಸತ್ಯ ಘಟನೆಗಳನ್ನು ಆಧರಿಸಿದ ಸಾಕಷ್ಟು ಸಿನಿಮಾಗಳು ನಿರ್ಮಾಣವಾಗಿವೆ. ಒಂದಷ್ಟು ಸಿನಿಮಾಗಳು ಹೊಸ ಹೊಸ ದಾಖಲೆಗಳನ್ನು ಬರೆದರೆ, ಇನ್ನು ಕೆಲವು ಹೇಳ ಹೆಸರಿಲ್ಲದಂತೆ ಮಾಯವಾಗಿವೆ. ಇದೀಗ ಈ ಸತ್ಯ ಘಟನೆ ಆಧರಿತ ಸಿನಿಮಾಗಳ ಸಾಲಿಗೆ ಇನ್ನೊಂದು ಸಿನಿಮಾ ಸೇರ್ಪಡೆಯಾಗುತ್ತಿದೆ. ಆ ಚಿತ್ರವೇ ʻಕೇಸರಿ ಚಾಪ್ಟರ್ 2ʼ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ಆರ್ ಮಾಧವನ್ ಅಭಿನಯದ ಈ ಚಿತ್ರ 1919ರ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ತೆರೆಮರೆಯ ಕಥೆಯನ್ನು ಪ್ರೇಕ್ಷಕರ ಮುಂದೆ ತೆರೆದಿಡಲಿದೆ. ಇದೆಲ್ಲದರ ನಡುವೆಯೇ ಈ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ.
3 ನಿಮಿಷ 2 ಸೆಕೆಂಡುಗಳ ಕೋರ್ಟ್ ರೂಮ್ ಡ್ರಾಮಾ ಶೈಲಿಯ ಕೇಸರಿ ಚಾಪ್ಟರ್ 2 ಟ್ರೇಲರ್‌ನಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ಬ್ರಿಟಿಷ್ ಆಡಳಿತದ ಜನರಲ್ ಡೈಯರ್ ಪಿತೂರಿಯಡಿಯಲ್ಲಿ ಹೇಗೆ ನಡೆಸಲಾಯಿತು ಎಂಬುದನ್ನು ಕಣ್ಣಿಗೆ ಕಟ್ಟಿದಂತೆ ತೋರಿಸಲಾಗಿದೆ. ಈ ಘಟನೆಯ ಸತ್ಯಾಸತ್ಯತೆಯನ್ನು ಬಯಲ...
Click here to read full article from source
To read the full article or to get the complete feed from this publication, please
Contact Us.