Bangalore, ಮೇ 10 -- ಕನ್ನಡ ನಟಿ ರಾಧಾ ಭಗವತಿ ನಟನೆಯ ಭಾರ್ಗವಿ ಎಲ್‌ಎಲ್‌ಬಿ ಸೀರಿಯಲ್‌ ಕಿರುತೆರೆ ವೀಕ್ಷಕರ ಮೆಚ್ಚುಗೆ ಪಡೆಯುತ್ತಿದೆ. ಲಾಯರ್‌ ಪಾತ್ರದಲ್ಲಿ ರಾಧಾ ಭಗವತಿ ಮಿಂಚುತ್ತಿದ್ದಾರೆ. ಎದುರಾಳಿಗಳ ವಿರುದ್ಧ ಖಡಕ್‌ ಡೈಲಾಗ್‌ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಭಾರ್ಗವಿ ಅವತಾರದಲ್ಲಿ "ಇವಳೇನಾ ಅಮೃತಧಾರೆ ಮಲ್ಲಿ" ಎಂದು ಅಚ್ಚರಿ ತರುವಂತೆ ರಾಧಾ ಭಗವತಿ ನಟಿಸುತ್ತಿದ್ದಾರೆ. ಇತ್ತೀಚಿನ ಎಪಿಸೋಡ್‌ನಲ್ಲಿ ಇವರ ಆವೇಶದ ನಟನೆಗೆ ಸೀರಿಯಲ್‌ ವೀಕ್ಷಕರು ಫುಲ್‌ ಮಾರ್ಕ್‌ ನೀಡಿದ್ದಾರೆ.

ಈಕೆಯ ನಟನೆಗೆ "ಸೂಪರ್‌ ಭಾರ್ಗವಿ" ಎಂದೆಲ್ಲ ಜನರು ಕಾಮೆಂಟ್‌ ಮಾಡುತ್ತಿದ್ದಾರೆ. ಅಮೃತಧಾರೆಯಲ್ಲಿ ಈಕೆಯ ಅಳುವಿಗೆ, ನೋವಿಗೆ ಜನರು "ಮಲ್ಲಿ ಮಲ್ಲಿ ಮಿಂಚುಳ್ಳಿ" ಎಂದು ಕಾಮೆಂಟ್‌ ಮಾಡುತ್ತಿದ್ದರು. ಇದೀಗ ಸೀರಿಯಲ್‌ ನಾಯಕಿ ಪಾತ್ರಕ್ಕೂ ಸೈ ಎಂದು ತೋರಿಸಿಕೊಟ್ಟಿದ್ದಾರೆ.

ಇತ್ತೀಚೆಗೆ ರಾಧಾ ಭಾಗವತಿ ಅಪಾಯವಿದೆ ಎಚ್ಚರಿಕೆ ಎಂಬ ಸಿನಿಮಾದಲ್ಲಿ ನಟಿಸಿದ್ದರು. ಇದೇ ಸಮಯದಲ್ಲಿ ರಾಧಾ ಭಗವತಿ ಅವರು ಭಾರ್ಗವಿ ಎಲ್‌ಎಲ್‌ಬಿಯಲ್ಲಿ ನಾಯಕಿ ಪಾತ್ರ...