Bengaluru, ಮಾರ್ಚ್ 17 -- Karnataka Assembly Session: ವಿಧಾನ ಸಭೆ ಕಲಾಪದಲ್ಲಿ ಇಂದು (ಮಾರ್ಚ್ 17) ರಾಜ್ಯಪಾಲರ ಭಾಷಣಕ್ಕೆ ವಂದನಾರ್ಪಣೆ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣದ ನಡುವೆ ವಿಪಕ್ಷ ಸದಸ್ಯರಿಂದ ಪದೇಪದೆ ಪ್ರಶ್ನೆಗಳು ಎದುರಾದವು. ಸಿಎಂ ಸಿದ್ದರಾಮಯ್ಯ ಅವರು ತಮ್ಮ ಭಾಷಣದ ನಡುವೆ, ಎಸ್ಇಪಿ, ಟಿಎಸ್‌ಪಿ ಕಾನೂನು ವಿಚಾರ ಪ್ರಸ್ತಾಪ ಮಾಡಿದ ನಂತರದಲ್ಲಿ ಡಾ ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಯಾರು ಎಂಬ ಬಗ್ಗೆ ಆಡಳಿತ ಪಕ್ಷ ಹಾಗೂ ವಿಪಕ್ಷ ಸದಸ್ಯರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.

ವಿಧಾನ ಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿದ ರಾಜ್ಯಪಾಲರ ಭಾಷಣಕ್ಕೆ ಸಿಎಂ ಸಿದ್ದರಾಮಯ್ಯ ಇಂದು ವಂದನಾರ್ಪಣೆ ಭಾಷಣ ಮಾಡಿದರು. ಆ ಸಂದರ್ಭದಲ್ಲಿ, "ವಿಪಕ್ಷ ನಾಯಕ ಆರ್ ಅಶೋಕ ಅವರು ಸುದೀರ್ಘವಾಗಿ ಎಸ್ಇಪಿ, ಟಿಎಸ್‌ಪಿ ಬಗ್ಗೆ ಮಾತನಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇದಕ್ಕೆ ಸುದೀರ್ಘವಾಗಿ ಉತ್ತರ ಕೊಡುತ್ತೇನೆ. ಆರ್ಟಿಕಲ್ 46 ನಿರ್ದೇಶನಾತ್ಮಕ ತತ್ತ್ವಗಳಿಗೆ ಅನುಗುಣವಾಗಿ ಪರಿಶಿಷ್ಟ ಜಾತಿ, ...