Bengaluru, ಫೆಬ್ರವರಿ 2 -- Sidlingu 2: ಸಿದ್ಲಿಂಗು, ನೀರ್ ದೋಸೆ, ತೋತಾಪುರಿ ಸಿನಿಮಾ ಖ್ಯಾತಿಯ ವಿಜಯ ಪ್ರಸಾದ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಸಿದ್ಲಿಂಗು 2 ಸಿನಿಮಾ ಬಿಡುಗಡೆಗೆ ಹತ್ತಿರ ಬಂದಿದೆ. ಇದೇ ಪ್ರೇಮಿಗಳ ದಿನದ ಪ್ರಯುಕ್ತ ಫೆ. 14ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ಅದಕ್ಕೂ ಮೊದಲು ಈ ಚಿತ್ರದ ಮೊದಲ ವಿಡಿಯೋ ಹಾಡು, ಶನಿವಾರ ಸಂಜೆ ನಾಗದೇವನಹಳ್ಳಿ ಬಳಿಯ ಅನಾಥಶ್ರಮದಲ್ಲಿ ಬಿಡುಗಡೆಯಾಗಿದೆ. 'ಕಥೆಯೊಂದು' ಎಂದು ಶುರುವಾಗುವ ಈ ಹಾಡಿಗೆ ಸಾಹಿತ್ಯವನ್ನು ಅರಸು ಅಂತಾರೆ ಬರೆದರೆ, ಅನೂಪ್‍ ಸೀಳಿನ್‍ ಸಂಗೀತ ಸಂಯೋಜಿಸುವುದರ ಜೊತೆಗೆ, ಹಾಡಿಗೆ ಧ್ವನಿಯಾಗಿದ್ದಾರೆ. ನಾಯಕ ಯೋಗಿ ಮತ್ತು ನಾಯಕಿ ಸೋನು ಗೌಡ ಹಾಡಿನಲ್ಲಿ ಚೆಂದವಾಗಿ ಕಂಡಿದ್ದಾರೆ.

'ಸಿದ್ಲಿಂಗು 2' ಚಿತ್ರದ ಬಗ್ಗೆ ಮಾತನಾಡುವ ಯೋಗಿ, "ಈ ಚಿತ್ರದ ಮುಹೂರ್ತ ಕಳೆದ ವರ್ಷ ದೇವರ ಎದುರು ಆಗಿತ್ತು. ಈಗ ಚಿತ್ರದ ಮೊದಲ ಹಾಡು ದೇವರ ಮಕ್ಕಳ ಎದುರು ಬಿಡುಗಡೆಯಾಗುತ್ತಿದೆ. ಚಿತ್ರ ಬಹಳ ಚೆನ್ನಾಗಿ ಮೂಡಿ ಬಂದಿದೆ. ನಾವೆಲ್ಲರೂ ಬಹಳ ಎಕ್ಸೈಟ್‍ ...