ಭಾರತ, ಮಾರ್ಚ್ 28 -- ಸನ್​ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ವರ್ಷದ ಅಂತರದಲ್ಲಿ 2 ಬಾರಿ ಮುಖಾಮುಖಿಯಾಗಿವೆ. ಎರಡೂ ಪಂದ್ಯಗಳಲ್ಲಿ ಎರಡು ವಿಭಿನ್ನ ದೃಶ್ಯಗಳು ಕಂಡು ಬಂದಿವೆ. 2024ರ ಮೇ 8ರಂದು ಇದೇ ಹೈದರಾಬಾದ್ ವಿರುದ್ಧ 10 ವಿಕೆಟ್​ಗಳಿಂದ ಸೋತಿದ್ದ ಲಕ್ನೋ, ಈಗ 2025ರ ಮಾರ್ಚ್​ 27ರಂದು ಸೋಲಿನ ಸೇಡು ತೀರಿಸಿಕೊಂಡಿದೆ. ಆದರೆ ಅಂದು ಸೋತಿದ್ದ ಪಂದ್ಯದಲ್ಲಿ ಲಕ್ನೋಗೆ ಕೆಎಲ್ ರಾಹುಲ್ ನಾಯಕನಾಗಿದ್ದರು. ಪರಾಭವದ ಬೆನ್ನಲ್ಲೇ ಫ್ರಾಂಚೈಸಿ ಮಾಲೀಕ ಸಂಜೀವ್ ಗೋಯೆಂಕಾ ಅವರು ರಾಹುಲ್​ರನ್ನು ಹಿಗ್ಗಾಮುಗ್ಗಾ ಬೈದ್ದಿದ್ದರು. ಇದರ ವಿಡಿಯೋ ವೈರಲ್ ಆಗಿತ್ತು. ಇದೀಗ ಆ ಸೇಡು ತೀರಿಸಿಕೊಂಡ ಬೆನ್ನಲ್ಲೇ ಪ್ರಸ್ತುತ ನಾಯಕನಾದ ರಿಷಭ್ ಪಂತ್​ ಅವರನ್ನು ಗಟ್ಟಿಯಾಗಿ ಅಪ್ಪಿಕೊಂಡಿದ್ದಾರೆ. ಇದರ ವಿಡಿಯೋ ಕೂಡ ನೆಟ್ಸ್​​ನಲ್ಲಿ ಹರಿದಾಡುತ್ತಿದೆ.

ಹೈದರಾಬಾದ್​ನ ರಾಜೀವ್ ಗಾಂಧಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಎಸ್​ಆರ್​ಹೆಚ್, ತನ್ನ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 190...