ಭಾರತ, ಏಪ್ರಿಲ್ 7 -- Power Star Dharege Doddavanu: 2014ರಲ್ಲಿ ನಿರ್ದೇಶಕರು ಮಾಡಿಟ್ಟುಕೊಂಡಿದ್ದ ಕಥೆಯನ್ನು ನಟ ಯಶ್‌ಗೆ ಹೇಳಿದ್ದರು. ಆದರೆ, ಆವತ್ತು ಅದು ಕಾರಣಾಂತರಗಳಿಂದ ಮುಂದುವರಿಯಲಿಲ್ಲ. ಇದೀಗ ದಶಕದ ಹಿಂದಿನ ಕಥೆಯನ್ನೇ ಮತ್ತೆ ಬೇರೆ ರೂಪದಲ್ಲಿ ತೆರೆಮೇಲೆ ತರಲು ಸಿದ್ಧರಾಗಿದ್ದಾರೆ ನಿರ್ದೇಶಕ ಸೂರ್ಯ. ಈ ಚಿತ್ರಕ್ಕೆ ʻಪವರ್ ಸ್ಟಾರ್ ಧರೆಗೆ ದೊಡ್ಡವನುʼ ಎಂಬ ಶೀರ್ಷಿಕೆ ಇಡಲಾಗಿದ್ದು, ಪುನೀತ್‌ ರಾಜ್‌ಕುಮಾರ್‌ ಅವರ ಆಶಯವನ್ನು ಆಧರಿಸಿ ಈ ಸಿನಿಮಾ ಸೆಟ್ಟೇರಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಈ ಚಿತ್ರದ ಮುಹೂರ್ತ ನೆರವೇರಿದೆ.

ಯಶ್‌ಗೆ ಬರೆದ ಕಥೆ ಪುನೀತ್‌ ರಾಜ್‌ಕುಮಾರ್‌ ಹೆಸರಲ್ಲಿ ಹೇಗೆ ಬದಲಾಯ್ತು ಎಂಬುದನ್ನು ನಿರ್ದೇಶಕ ಸೂರ್ಯ ಹೇಳಿಕೊಂಡಿದ್ದಾರೆ. "ಇದೊಂದು ಸ್ಪೂರ್ತಿದಾಯಕ ಕಥೆ. ನಾನು ಸುಮಾರು 15 ಚಿತ್ರಗಳಲ್ಲಿ ಸಹಾಯಕ ಹಾಗೂ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಇದು ನನ್ನ ಮೊದಲ ಪೂರ್ಣ ಪ್ರಮಾಣದ ನಿರ್ದೇಶನದ ಚಿತ್ರ. ನಾನು ಈ ಹಿಂದೆ 2014ರಲ್ಲಿ ನಟ ಯಶ್ ರವರಿಗೆ ಮಾಡಿದಂತಹ ಕಥೆ ಇದು. ಆಗಲೇ ...