Bengaluru, ಮೇ 9 -- ಹಿಂದುತ್ವದ ಬಗ್ಗೆ ತಮ್ಮ ಪ್ರಖರ ಭಾಷಣಗಳ ಮೂಲಕವೇ ಸದ್ದು ಮಾಡಿದ್ದ, ಫೈರ್‌ ಬ್ರಾಂಡ್‌ ಎಂದೇ ಖ್ಯಾತಿ ಪಡೆದ ಚೈತ್ರಾ ಕುಂದಾಪುರ ಇದೀಗ ಮದುವೆ ಸಂಭ್ರಮದಲ್ಲಿದ್ದಾರೆ.

ಇಂದು (ಮೇ 9) ಕಮಲಶಿಲೆ ಬ್ರಾಹ್ಮೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀಕಾಂತ್‌ ಕಶ್ಯಪ್‌ ಅವರ ಕೈ ಹಿಡಿಯಲಿದ್ದಾರೆ ಚೈತ್ರಾ ಕುಂದಾಪುರ.

ಅಂದಹಾಗೆ, ಚೈತ್ರಾ ಕುಂದಾಪುರ ಮತ್ತು ಶ್ರೀಕಾಂತ್‌ ಕಶ್ಯಪ್‌ ಅವರದ್ದು 12 ವರ್ಷಗಳ ಪ್ರೀತಿ. ಒಂದೇ ಕಾಲೇಜಿನಲ್ಲಿಯೇ ಓದಿದ್ದ ಈ ಜೋಡಿ, ಇದೀಗ ಬಾಳ ಬಂಧನಕ್ಕೆ ಬಲಗಾಲಿಡುತ್ತಿದ್ದಾರೆ.

ಈಗಾಗಲೇ ಕುಂದಾಪುರದ ಮನೆಯಲ್ಲಿ ಮದರಂಗಿ ಶಾಸ್ತ್ರವನ್ನೂ ಮುಗಿಸಿಕೊಂಡಿದ್ದಾರೆ ಚೈತ್ರಾ. ಆದರೆ, ಹುಡುಗ ಯಾರು ಎಂಬುದನ್ನು ಮಾತ್ರ ಗೌಪ್ಯವಾಗಿಟ್ಟಿದ್ದರು.

ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಳ್ಳುವ ಮೂಲಕ, "ಬದುಕಿನ ಸಂಕಷ್ಟದಿಂದ ಸಂಭ್ರಮದವರೆಗೂ ಜೊತೆ ನಿಂತ ಜೀವದೊಂದಿಗೆ ಸಪ್ತಪದಿ ಇಡುವ ಸಮಯ ಬಂದಿದೆ. ನಿಮ್ಮೆಲ್ಲರ ಹಾರೈಕೆ ನಮ್ಮನ್ನು ಕಾಯಲಿ..." ಎಂದಿದ್ದಾರೆ.

ಅಂದಹಾಗೆ ಶ್ರೀಕಾಂತ್‌ ಕ...