ಭಾರತ, ಮಾರ್ಚ್ 24 -- ಹುಬ್ಬಳ್ಳಿ: ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಮುಂಬರುವ 'ಡಬ್ಲುಟಿಟಿ' ಸ್ಟಾರ್ ಕಂಟೆಂಡರ್ ಅಂತಾರಾಷ್ಟ್ರೀಯ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಧಾರವಾಡದ ಸಮರ್ಥ್ ಕುರ್ಡಿಕೇರಿ ಅವರು ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಈ ಮಹತ್ವದ ಟೂರ್ನಿ ಚೆನ್ನೈನಲ್ಲಿ ಮೊದಲ ಬಾರಿಗೆ ಮಾರ್ಚ್​ 25 ರಿಂದ 29ರ ರವರೆಗೆ ನಡೆಯಲಿದೆ. ಪ್ರಸ್ತುತ ಭಾರತದ 35ನೇ ಸ್ಥಾನದಲ್ಲಿರುವ ಸಮರ್ಥ್, ಕಾಸ್ಮೋಸ್ ಕ್ಲಬ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಬೆಂಗಳೂರಿಗೆ ಸ್ಥಳಾಂತರಗೊಂಡರು. ಪ್ರಸ್ತುತ ಭಾರತದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಟೂರ್ನಿಯಲ್ಲಿ ಜಪಾನ್‌ನ ಟಿ ಹರಿಮೊಟೊ, ಬ್ರೆಜಿಲ್‌ನ ಎಚ್ ಕ್ಯಾಲ್ಡೆರಾನೊ, ಡೆನ್ಮಾರ್ಕ್‌ನ ಜೆ ಗ್ರೋತ್, ನೈಜೇರಿಯಾದ ಕ್ವಾದ್ರಿ ಅರಿನಾ, ಶರತ್ ಕಮಲ್, ಸುತಿತ್ರಾ ಮುಖರ್ಜಿ, ಸ್ವಸ್ತಿಕ್ ಘೋಷ್, ಮಾನವ್ ಥಕ್ಕರ್, ಭಾರತದ ಮಾನವ್ ಥಕ್ಕರ್ ಆಟವಾಡಲಿದ್ದಾರೆ. ಸಮರ್ಥಗೆ ಧಾರವಾಡ ಕಾಸ್ಮೋಸ್ ಕ್ಲಬ್ ಅಧ್ಯಕ್ಷ ನಿತೀನ್ ಟಗರಪುರ ಸೇರಿದಂತೆ...