Bengaluru, ಏಪ್ರಿಲ್ 4 -- ಅಂತರಿಕ್ಷದಲ್ಲಿ ಕಳವಳ ಮೂಡಿಸಿರುವ 2024 YR4 ಹೆಸರಿನ ಕ್ಷುದ್ರಗ್ರಹವು ಈಗ ಭೂಮಿಯ ಬದಲು ಚಂದ್ರನ ಕಡೆಗೆ ಚಲಿಸತೊಡಗಿದೆ. ವಿಜ್ಞಾನಿಗಳು ಇದನ್ನು ಸಿಟಿ ಕಿಲ್ಲರ್ ಎಂದು ಗುರುತಿಸಿದ್ದಾರೆ. ಅಂದರೆ, ಇದು ನಗರವನ್ನು ನಾಶಬಲ್ಲ ಕ್ಷುದ್ರಗ್ರಹ ಎಂದು ಅರ್ಥ. ಇದು ಚಂದ್ರನ ಮೇಲೆ ಡಿಕ್ಕಿ ಹೊಡೆದರೆ ಏನಾಗಬಹುದು.

ಈ ಕ್ಷುದ್ರಗ್ರಹವು ಭೂಮಿಗೆ 2032ರಲ್ಲಿ ಡಿಕ್ಕಿ ಹೊಡೆಯವ ಸಾಧ್ಯತೆ ಶೇಕಡ 3 ಎಂದು ವಿಜ್ಞಾನಿಗಳು ಈ ಹಿಂದೆ ನಡೆಸಿದ ಅಧ್ಯಯನವು ಬಹಿರಂಗಪಡಿಸಿತ್ತು.

ಆದರೆ, ಈಗ ಕೆಲವೇ ವಾರಗಳ ಹಿಂದೆ ಈ ಶೇಕಡವಾರು ಲೆಕ್ಕಾಚಾರ ಶೇಕಡ 0.28ಕ್ಕೆ ಇಳಿಕೆಯಾಗಿದೆ. ಅಂದರೆ ಕ್ಷುದ್ರಗ್ರಹದ ದಿಶೆ ಬದಲಾಗಿದೆ.

ಸುದೀರ್ಘ ವಿಶ್ಲೇಷಣೆಯ ಬಳಿಕ ನಾಸಾ ವಿಜ್ಞಾನಿಗಳು ಈ ಕ್ಷುದ್ರಗ್ರಹ ಚಲಿಸುತ್ತಿರುವ ದಿಕ್ಕನ್ನು ಗುರುತಿಸಿದ್ದಾರೆ. ಅದು ಚಂದ್ರನ ಕಡೆಗೆ ತಿರುಗಿರುವುದನ್ನು ದೃಢಪಡಿಸಿದ್ದಾರೆ.

ಖಗೋಳಶಾಸ್ತ್ರಜ್ಞ ಆಂಡ್ರ್ಯೂ ರಿವಿಕಿನ್ ಅವರ ಪ್ರಕಾರ, 2032 ರಲ್ಲಿ ಚಂದ್ರನೊಂದಿಗೆ ಡಿಕ್ಕಿ ಹೊಡೆಯುವ ಸಾಧ್ಯತೆಯು 2 ಪರ್ಸೆಟ್...