ಭಾರತ, ಫೆಬ್ರವರಿ 27 -- ಮಾರ್ಚ್‌ ಎಂದರೆ ಆರ್ಥಿಕ ವರ್ಷದ ಕೊನೆಯ ತಿಂಗಳು. ಈ ತಿಂಗಳು ಮಕ್ಕಳಿಗೆ ಪರೀಕ್ಷೆಗಳು ನಡೆಯುವ ಕಾಲ. ಪ್ರತಿವರ್ಷ ಮಾರ್ಚ್‌ನಲ್ಲಿ ಒಂದಿಷ್ಟು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವಿಶೇಷ ದಿನಗಳನ್ನು ಆಚರಿಸಲಾಗುತ್ತದೆ. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ, ವಿಶ್ವ ನೀರಿನ ದಿನ, ವಿಶ್ವ ವನ್ಯಜೀವಿ ದಿನ, ಧೂಮಪಾನ ವಿರೋಧಿ ದಿನ ಸೇರಿದಂತೆ ಈ ತಿಂಗಳಲ್ಲಿ ಹಲವು ವಿಶೇಷ ದಿನಗಳು ಬರುತ್ತವೆ. ಈ ವರ್ಷ ಹೋಳಿ ಹಬ್ಬ ಕೂಡ ಮಾರ್ಚ್‌ ತಿಂಗಳಲ್ಲೇ ಬರುತ್ತದೆ.

ಮಾರ್ಚ್‌ 1 ರಿಂದ 31ರವರೆಗೆ ಏನೆಲ್ಲಾ ವಿಶೇಷ ದಿನಗಳು ಹಾಗೂ ಹಬ್ಬಗಳು ಬರುತ್ತವೆ ಎಂಬುದನ್ನು ನೀವು ತಿಳಿಯಲು ಬಯಸಿದರೆ ಈ ಪಟ್ಟಿ ನೋಡಿ. ಇದರಿಂದ ನೀವು ರಜಾದಿನಗಳನ್ನು ಗುರುತಿಸಬಹುದು. ಮಾರ್ಚ್ ತಿಂಗಳ ವಿಶೇಷ ದಿನಗಳ ಸಮಗ್ರ ಪಟ್ಟಿ ಇಲ್ಲಿದೆ ಗಮನಿಸಿ.

ಇದನ್ನೂ ಓದಿ: Long Weekends: 2025ರ ಲಾಂಗ್‌ ವೀಕೆಂಡ್‌ಗಳ ಪಟ್ಟಿ ಇಲ್ಲಿದೆ, ಪ್ರವಾಸ ಹೋಗ್ಬೇಕು ಅನ್ನೋರು ಗಮನಿಸಿ, ಈಗಲೇ ಪ್ಲಾನ್ ಮಾಡಿ

ಮಾರ್ಚ್‌ 1: ಶೂನ್ಯ ತಾರತಮ್ಯ ದಿನ, ವಿಶ್ವ ನಾಗರಿಕ ರಕ್ಷ...