Bengaluru, ಜೂನ್ 10 -- ಕೊಪ್ಪಳ ಜಿಲ್ಲೆಯ ಆನೆಗುಂದಿ ಸಮೀಪದಲ್ಲಿರುವ ಅಂಜನಾದ್ರಿ ಬೆಟ್ಟದ ಕುರಿತ ಆಸಕ್ತಿಕರ ವಿಚಾರಗಳು ಸಾಕಷ್ಟು ಮಂದಿಗೆ ಗೊತ್ತಿಲ್ಲ. ಆಂಜನೇಯನ ಜನ್ಮಸ್ಥಳ ಅಂತಲೇ ಕರೆಯಲಾಗುವ ಈ ಬೆಟ್ಟಕ್ಕೆ ಅಂಜನಾದ್ರಿ ಬೆಟ್ಟ ಎಂಬ ಹೆಸರು ಹೇಗೆ ಬಂತು, ಇದರ ಹಿಂದಿರುವ ಪುರಾಣಗಳ ಕಥೆಯ ಏನು ಎಂಬುದನ್ನು ಜ್ಯೋತಿಷಿ ಎಚ್ ಸತೀಶ್ ಅವರು ವಿವರಿಸಿದ್ದಾರೆ.

ದ್ವಾಪರ ಯುಗದಲ್ಲಿ ಅಂಜನಾದ್ರಿ ಬೆಟ್ಟದ ಬಗ್ಗೆ ತಿಳಿದುಬರುತ್ತದೆ. ಆ ದಿನಗಳಲ್ಲಿ ಕೇಸರಿ ಎಂಬ ಶಿವನ ಭಕ್ತನಿರುತ್ತಾನೆ. ಇವನು ತನ್ನ ಅಪಾರ ಭಕ್ತಿಯಿಂದ ಶಿವನ ಅನುಗ್ರಹಕ್ಕೆ ಪಾತ್ರನಾಗಿರುತ್ತಾನೆ. ಆದರೂ ಸಹ ಇವನಲ್ಲಿದ್ದ ಕೆಲವೊಂದು ತಪ್ಪು ಗುಣಗಳನ್ನು ಜನಸಾಮಾನ್ಯರು ವಿರೋಧಿಸುತ್ತಾರೆ. ಹಲವು ಬಾರಿ ದೇವೇಂದ್ರ ಮುಂತಾದ ದೇವತೆಗಳು ಇವನನ್ನು ಹತ್ಯೆಗೆಯ್ಯಲು ಪ್ರಯತ್ನಿಸುತ್ತಾರೆ. ಇದರಿಂದ ಬೇಸರಗೊಂಡ ಕೇಸರಿಯು ಸಾವನ್ನೇ ಗೆಲ್ಲುವ ತೀರ್ಮಾನಕ್ಕೆ ಬರುತ್ತಾನೆ. ಲಯಕಾರಕನಾದ ಪರಮಶಿವನನ್ನು ಕುರಿತು ಕೇಸರಿಯು ಕಠಿಣವಾದ ತಪಸ್ಸನ್ನು ಆಚರಿಸುತ್ತಾನೆ. ಇವನ ತಪಸ್ಸಿನಿಂದ ಮೂರು ಲ...