ಭಾರತ, ಫೆಬ್ರವರಿ 4 -- Kerala Anganwadi Food: ಸಾಮಾಜಿಕ ಮಾಧ್ಯಮಗಳ ಈ ಕಾಲಘಟ್ಟದಲ್ಲಿ ಕೆಲವೊಂದು ವಿಚಾರಗಳು ಬಹಳ ಬೇಗ ಗಮನಸೆಳೆಯುತ್ತವೆ. ಅಂಗನವಾಡಿ ಆಹಾರ ಎಲ್ಲರಿಗೂ ಇಷ್ಟವಾಗುವುದಿಲ್ಲ. ಕೇರಳದ ಅಂಗನವಾಡಿಗಳಲ್ಲಿ ಪುಟ್ಟ ಮಕ್ಕಳಿಗೆ ಉಪ್ಪಿಟ್ಟು ಕೊಡ್ತಾರೆ. ಆದರೆ, ಈ ಉಪ್ಪಿಟ್ಟು ಪುಟ್ಟ ಮಕ್ಕಳಿಗೆ ಇಷ್ಟವಾಗುತ್ತಿಲ್ಲ. ಅದನ್ನು ಪುಟ್ಟ ಬಾಲಕನೊಬ್ಬ ನೇರವಾಗಿ ಹೇಳಿದ ವಿಡಿಯೋ ವೈರಲ್ ಆಗಿದ್ದು, ಇದಕ್ಕೆ ಕೇರಳದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ವೀಣಾ ಜಾರ್ಜ್‌ ಸ್ಪಂದಿಸಿರುವುದು ಎಲ್ಲರ ಗಮನಸೆಳೆದಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ವೀಣಾ ಜಾರ್ಜ್ ಅವರು ಸೋಮವಾರ ಶಂಕು ಎಂಬ ಮಗುವಿನ ವಿಡಿಯೋವನ್ನು ತನ್ನ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದ್ದು, ಆ ಮಗುವಿನ ವಿನಂತಿ ಪ್ರಕಾರ, ಅಂಗನವಾಡಿಯ ಮೆನು ಪರಿಷ್ಕರಿಸಲಾಗುವುದು ಎಂದು ಘೋಷಿಸಿದ್ದಾರೆ.

ಆ ಪುಟ್ಟ ಬಾಲಕ ಬಹಳ ಮುಗ್ಧವಾಗಿ ಮಾಡಿರುವ ಮನವಿಯನ್ನು ಪರಿಗಣಿಸಲಾಗುವುದು ಎಂದು ಹೇಳಿದ ಸಚಿವೆ ವೀಣಾ ಜಾರ್ಜ್‌, ಶಂಕು ಮತ್ತು ಆತನ ತಾಯಿಗೆ ಶುಭ ಹಾರೈಸಿದ್ದಾರೆ. ಅಲ್ಲ...