ಭಾರತ, ಡಿಸೆಂಬರ್ 9 -- ವಯಸ್ಸು 18 ಆಯಿತಾ? 25 ವರ್ಷ ವಯಸ್ಸಿನೊಳಗೇ ಇದ್ದೀರಾ? ಜನವರಿ 1ರಿಂದ ಕಾಂಡೋಮ್ಸ್‌ ಫ್ರೀ! ಅನಗತ್ಯ ಗರ್ಭಧಾರಣೆ ಮತ್ತು ಲೈಂಗಿಕವಾಗಿ ಹರಡುವ ರೋಗ (STD) ಗಳ ಹರಡುವಿಕೆ ತಡೆಯುವುದಕ್ಕಾಗಿಯೇ ಈ ಕ್ರಮ! ಆದರೆ ಇದು ನಮ್ಮ ದೇಶದಲ್ಲಿ ಅಲ್ಲ; ಫ್ರಾನ್ಸ್‌ನಲ್ಲಿ!

ಹೌದು, ಅನಗತ್ಯ ಗರ್ಭಧಾರಣೆ ಮತ್ತು ಲೈಂಗಿಕವಾಗಿ ಹರಡುವ ರೋಗಗಳ (ಎಸ್‌ಟಿಡಿ) ಹರಡುವಿಕೆಯನ್ನು ಕಡಿಮೆ ಮಾಡುವ ಗುರಿಯನ್ನು ಫ್ರಾನ್ಸ್‌ನದ್ದು. ಹೀಗಾಗಿ ದೇಶದಲ್ಲಿರುವ 18 ರಿಂದ 25 ವರ್ಷ ವಯಸ್ಸಿನವರಿಗೆ ಶೀಘ್ರದಲ್ಲೇ ಉಚಿತವಾಗಿ ಕಾಂಡೋಮ್‌ಗಳು ಲಭ್ಯವಾಗಲಿದೆ ಎಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಹೇಳಿದ್ದಾರೆ.

"ಔಷಧಾಲಯಗಳಲ್ಲಿ, ಜನವರಿ 1 ರಿಂದ 18 ರಿಂದ 25 ವರ್ಷ ವಯಸ್ಸಿನವರಿಗೆ ಕಾಂಡೋಮ್‌ ಉಚಿತವಾಗಿ ಸಿಗಲಿವೆ" ಎಂದು ಎಮ್ಯಾನುಯೆಲ್ ಮ್ಯಾಕ್ರನ್ ಹೇಳಿದ್ದಾರೆ.

ಪಶ್ಚಿಮ ಫ್ರಾನ್ಸ್‌ನ ಪೊಯಿಟಿಯರ್ಸ್‌ನ ಉಪನಗರವಾದ ಫಾಂಟೈನ್-ಲೆ-ಕಾಮ್ಟೆ ಎಂಬ ಆರೋಗ್ಯ ಚರ್ಚೆಯ ಸಂದರ್ಭದಲ್ಲಿ ಯುವಕರೊಂದಿಗೆ ಮಾತನಾಡುತ್ತ, ಎಮ್ಯಾನುಯೆಲ್ ಮ್ಯಾಕ್ರನ...