ಭಾರತ, ಮಾರ್ಚ್ 31 -- 45 Teaser: ಅರ್ಜುನ್‌ ಜನ್ಯ ಚೊಚ್ಚಲ ನಿರ್ದೇಶನದ 45 ಚಿತ್ರದ ಟೀಸರ್‌ ರಿಲೀಸ್‌ ಆಗಿದೆ. ಆರಂಭದಿಂದಲೂ ಈ ಸಿನಿಮಾ ಒಂದಷ್ಟು ವಿಚಾರಕ್ಕೆ ಸದ್ದು ಮಾಡಿತ್ತು. ತಾರಾಗಣದಿಂದ ಹಿಡಿದು, ಸಿನಿಮಾ ಮೇಕಿಂಗ್‌ ಮತ್ತು ಕಥೆಯ ವಿಚಾರವಾಗಿ ಚರ್ಚೆಯಲ್ಲಿತ್ತು. ಇದೀಗ ಇದೇ ಸಿನಿಮಾದ ಮೊದಲ ಟೀಸರ್‌ ಬಿಡುಗಡೆ ಆಗಿದೆ. ಕನ್ನಡದಲ್ಲಷ್ಟೇ ಅಲ್ಲದೆ, ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಈ ಸಿನಿಮಾದ ಟೀಸರ್‌ ರಿಲೀಸ್‌ ಆಗಿದೆ. ಹಾಗೆ ಟೀಸರ್‌ ಹೊರಬಂದಿದ್ದೇ ತಡ, ಇಡೀ ಸೌತ್‌ ಇಂಡಿಯಾ ಜತೆಗೆ ಹಿಂದಿ ಭಾಷಿಕರು ಈ ಚಿತ್ರದ ಬಗ್ಗೆ ಮಾತನಾಡುತ್ತಿದ್ದಾರೆ. ಅಷ್ಟೊಂದು ಎಪಿಕ್‌ ಆಗಿದೆ 45 ಚಿತ್ರದ ಟೀಸರ್.‌

ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖಪಾತ್ರದಲ್ಲಿ ನಟಿಸಿರುವ ಸಿನಿಮಾ ಈ 45. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಚಿತ್ರವಿದು. ರಮೇಶ್ ರೆಡ್ಡಿ ಅವರು ತಮ್ಮ ಸೂರಜ್ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ನ...