Bengaluru, ಮೇ 1 -- ಟಾಲಿವುಡ್ ನಟ, ನ್ಯಾಚುರಲ್ ಸ್ಟಾರ್ ನಾನಿ ನಟನೆಯ ʻಹಿಟ್ 3ʼ ಸಿನಿಮಾ ಇಂದು (ಮೇ 1) ಬಿಡುಗಡೆ ಆಗಿದೆ. ಹಿಟ್ ಫ್ರಾಂಚೈಸಿಯ ಮೂರನೇ ಸಿನಿಮಾ ಇದಾಗಿದೆ. ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದ ಹಿಟ್ 3 ಸಿನಿಮಾ, ನಾನಿ ವೃತ್ತಿ ಬದುಕಿನ ಅತ್ಯಂತ ಹಿಂಸಾತ್ಮಕ ಚಿತ್ರ ಎಂಬ ವಿಶೇಷಣದ ಜೊತೆಗೆ ತೆರೆಗೆ ಬಂದಿದೆ. ಹಿಟ್ 3 ಸಿನಿಮಾದಲ್ಲಿ ಅರ್ಜುನ್ ಸರ್ಕಾರ್ ಎಂಬ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಾನಿ ಅಬ್ಬರಿಸಿದ್ದಾರೆ. ಹಿಟ್ ಸಿನಿಮಾದ ಮೊದಲ ಭಾಗದಲ್ಲಿ ವಿಶ್ವಕ್ ಸೇನ್ ನಾಯಕನಾಗಿ ನಟಿಸಿದ್ದರೆ, ಎರಡನೇ ಭಾಗದಲ್ಲಿ ಅಡವಿ ಶೇಷ್ ನಾಯಕನಾಗಿದ್ದರು. ಇದೀಗ ಮೂರನೇ ಕೇಸ್‌ನಲ್ಲಿ ನಾನಿ ಎಂಟ್ರಿಕೊಟ್ಟಿದ್ದಾರೆ. ಶೈಲೇಶ್ ಕೊಲನು ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ಗುರುವಾರ ಬಿಡುಗಡೆಯಾಗಿರುವ ಹಿಟ್ 3 ಸಿನಿಮಾ, ಈಗಾಗಲೇ ತೆಲುಗು ರಾಜ್ಯಗಳಷ್ಟೇ ಅಲ್ಲದೆ, ಕರ್ನಾಟಕ ಮತ್ತು ವಿದೇಶಗಳಲ್ಲಿಯೂ ಪ್ರೀಮಿಯರ್ ಶೋ ಪ್ರದರ್ಶನ ಕಂಡಿದೆ. ಸೋಷಿಯಲ್ ಮೀಡಿಯಾದಲ್ಲಿಯೂ ಈ ಸಿನಿಮಾದ ಬಗ್ಗ...
Click here to read full article from source
To read the full article or to get the complete feed from this publication, please
Contact Us.