ಭಾರತ, ಮೇ 17 -- ಆಂಧ್ರ ಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಡಿಸಿಎಂ ಆದ ಬಳಿಕ ರಾಜಕೀಯದಲ್ಲಿ ಹೆಚ್ಚು ಸಕ್ರಿಯರಾಗಿದ್ದ ಪವನ್ ಕಲ್ಯಾಣ್, ಸಿನಿಮಾ ಕೆಲಸಗಳಿಂದಲೂ ದೂರ ಉಳಿದಿದ್ದರು. ಇದೀಗ ಇದೇ ಪವನ್ ಕಲ್ಯಾಣ್ ನಟನೆಯ ಮುಂದಿನ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಈ ಹಿಂದೆ ಕೆಲವು ಸಲ ಈ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗಿ ಮುಂದೂಡಲ್ಪಟ್ಟಿತ್ತು.
ಪವನ್ ಕಲ್ಯಾಣ್ ನಟನೆಯ ʻಹರಿ ಹರ ವೀರ ಮಲ್ಲುʼ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ ಸಾಗುತ್ತಿದೆ. ಇತ್ತ ಇದೇ ಚಿತ್ರದಿಂದ ಸರ್ಪ್ರೈಸ್ ಸುದ್ದಿಯೊಂದು ಇದೀಗ ಹೊರಬಿದ್ದಿದೆ. ಅಂದರೆ ಈ ಸಿನಿಮಾದ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ.
ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಸಿನಿಪ್ರಿಯರಿಗೆ ಇಷ್ಟವಾಗಿವೆ. ಬಿಗ್ ಬಜೆಟ್ ತಯಾರಾಗಿರುವ ʻಹರಿ ಹರ ವೀರ ಮಲ್ಲುʼ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆಯಾಗಲಿದೆ.
ʻಹರಿ ಹರ ವೀರ ಮಲ್ಲುʼ ಪಾತ್ರದಲ್ಲಿ ಪವನ್ ಕಲ್ಯಾಣ್ ಅಬ್ಬರಿಸಿದ್ದಾರೆ. ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.