ಭಾರತ, ಏಪ್ರಿಲ್ 19 -- ಶುಕ್ರವಾರವಷ್ಟೇ ಪ್ರೇಮ್‍ ಹುಟ್ಟುಹಬ್ಬದ ಸಂದರ್ಭದಲ್ಲಿ 'ಸ್ಪಾರ್ಕ್' ಎಂಬ ಚಿತ್ರದಲ್ಲಿನ ಅವರ ಪೋಸ್ಟರ್ ಬಿಡುಗಡೆಯಾಗಿತ್ತು. ಈ ಫೋಟೋ ಇದೀಗ ವಿವಾದಕ್ಕೆ ಕಾರಣವಾಗಿದ್ದು, ಚಿತ್ರತಂಡದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಕ್ಕೆ ನಟ-ನಿರ್ದೇಶಕ ರಮೇಶ್‍ ಇಂದಿರಾ ಮುಂದಾಗಿದ್ದಾರೆ.

'ಸ್ಪಾರ್ಕ್' ಚಿತ್ರದ ಪೋಸ್ಟರ್‌ನಲ್ಲಿ 'ನೆನಪಿರಲಿ' ಪ್ರೇಮ್‍, ಬೆಂಕಿ ಅಂಟಿರುವ ಭಿತ್ತಿಪತ್ರದಿಂದ ತಮ್ಮ ಸಿಗಾರ್ ಹೊತ್ತಿಸುತ್ತಿರುವ ದೃಶ್ಯವಿದೆ. ಈ ಭಿತ್ತಿಪತ್ರದಲ್ಲಿ ರಮೇಶ್‍ ಇಂದಿರಾ ಅವರ ಫೋಟೋ ಇದೆ. ತಮ್ಮ ಚಿತ್ರವನ್ನು ಅನುಮತಿ ಇಲ್ಲದೆ ಬಳಸಿಕೊಂಡಿರುವುದರಕ್ಕೆ ಚಿತ್ರತಂಡದ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಕ್ಕೆ ಇದೀಗ ರಮೇಶ್‍ ಇಂದಿರಾ ಮುಂದಾಗಿದ್ದಾರೆ.

ಇದನ್ನೂ ಓದಿ: ಈ ಚಿತ್ರದಲ್ಲಿ ನಟಿಸೋಕೆ ದೇವರಾಣೆ ನನಗೆ ಮನಸ್ಸಿರಲಿಲ್ಲ; ಲವ್ಲಿ ಸ್ಟಾರ್‌ ಪ್ರೇಮ್‍ ಯಾಕೆ ಹೀಗಂದ್ರು

ರಮೇಶ್‍ ಇಂದಿರಾ, 'ಸ್ಪಾರ್ಕ್' ಚಿತ್ರದಲ್ಲಿ ನಟಿಸುತ್ತಿಲ್ಲ. ನಟಿಸುವ ಕುರಿತು ಮಾತುಕತೆಯೂ ಆಗಿಲ್ಲವಂತೆ. ಮೇಲಾಗಿ ಬಳಸಿಕೊಂಡ...