Bengaluru, ಮೇ 9 -- ದಕ್ಷಿಣ ಭಾರತದ ಖ್ಯಾತ ನಟರಲ್ಲಿ ಸುಮನ್ ತಲ್ವಾರ್ ಸಹ ಒಬ್ಬರು. ಹಲವು ಭಾಷೆಗಳಲ್ಲಿ ಗುರುತಿಸಿಕೊಂಡಿರುವ ಸುಮನ್, ಈಗಾಗಲೇ 700ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ, ತೆಲುಗು, ತಮಿಳು ಮಾತ್ರವಲ್ಲದೆ ಒಟ್ಟು 11 ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಬೆಳೆದಿದ್ದು ತಮಿಳುನಾಡಿನಲ್ಲಾದರೂ, ಇವರದ್ದು ಮೂಲತಃ ಕರ್ನಾಟಕದ ಮಂಗಳೂರು. ಜಾಸ್ತಿ ಬೇರೆ ಭಾಷೆಗಳಲ್ಲೇ ಕಾಣಿಸಿಕೊಂಡಿದ್ದರೂ ತುಳು ಹಾಗೂ ಕನ್ನಡದ ಮೇಲೆ ಹೆಚ್ಚು ಗೌರವ. ಇದೀಗ ಇದೇ ಮೊದಲ ಬಾರಿಗೆ ಸುಮನ್ ಕಿರುತೆರೆಗೆ ಪ್ರವೇಶ ಮಾಡುತ್ತಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಶುರುವಾಗುತ್ತಿರುವ ʻಸ್ನೇಹದ ಕಡಲಲ್ಲಿʼ ಮೂಲಕ ಕನ್ನಡ ಕಿರುತೆರೆಗೆ ಆಗಮಿಸಿದ್ದಾರೆ. ಅವರಿಗಿಲ್ಲಿ 'ಮಾಧವ ಅರಸ್' ಎಂಬ ಮುಖ್ಯ ಪಾತ್ರ ಮಾಡುತ್ತಿದ್ದಾರೆ.
ಮಧ್ಯಮ ಕುಟುಂಬದಲ್ಲಿ ಬೆಳೆದಿರೋ ಸಿಂಪಲ್ ಹುಡುಗಿ ಕಥಾ ನಾಯಕಿ ಪಲ್ಲವಿ, ಹೆಚ್ಚು ಓದಿರೋ ಈಕೆ ಸೌಮ್ಯ ಗುಣದವಳು. ಮನೆಯವರ ಇಚ್ಛೆಯಂತೆ ಮದುವೆಯಾಗೋ ಪಲ್ಲವಿಗೆ ಮೊದಲ ರಾತ್ರಿಯಲ್ಲಿ ಗಂಡನ ನಿಜ ಮುಖದ ಅ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.