Bengaluru, ಏಪ್ರಿಲ್ 20 -- ಶ್ರೀ ರಾಘವೇಂದ್ರ ಮಹಾತ್ಮೆ ಧಾರಾವಾಹಿಯ ಮೊದಲ ಪ್ರೋಮೋ ಬಹುಕೋಟಿ ವೆಚ್ಚದ ಸಿನಿಮಾದ ಟೀಸರ್‌ನಂತೆ ಮೂಡಿಬಂದಿದೆ. ಗ್ರಾಫಿಕ್ಸ್‌ ಮತ್ತು ಮೇಕಿಂಗ್‌ ಮೂಲಕವೇ ವೀಕ್ಷಕರ ಗಮನ ಸೆಳೆದಿದೆ.

ಇನ್‌ಸ್ಟಾಗ್ರಾಂನಲ್ಲಿ "ಮನುಕುಲದ ಕಷ್ಟ ಕಳೆಯಲು ವಿಷ್ಣುವಿನ ಅಂಶವಾಗಿ, ಕಲಿಯುಗದ ಕಲ್ಪವೃಕ್ಷವಾಗಿ ಅವತರಿಸಿದ ಗುರು ಸಾರ್ವಭೌಮರ ಕತೆ.. ಶೀಘ್ರದಲ್ಲಿ" ಎಂಬ ಕ್ಯಾಪ್ಷನ್‌ ಮೂಲಕ ಪ್ರೋಮೋ ಹೊರಬಂದಿದೆ. ಈ ಪ್ರೋಮೋಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

ವಿಷ್ಣುವಿನ ದರ್ಶನದ ಮೂಲಕ ಪ್ರೋಮೋ ತೆರೆದುಕೊಳ್ಳುತ್ತದೆ. ವಿಷ್ಣುವಿನ ಅಂಶದಿಂದ ಜನಿಸಿದ ಶಂಕುಕರ್ಣನೂ ಪ್ರೋಮೋದಲ್ಲಿ ಕಾಣಿಸುತ್ತಾನೆ. ಹರಿ ಭಕ್ತಿಯ ಹರಿಕಾರ ಭಕ್ತಪ್ರಹ್ಲಾದ, ಉಗ್ರ ನರಸಿಂಹನಿಂದ ಹಿರಣ್ಯ ಕಶಿಪುವಿನ ಸಂಹಾರವೂ ಪ್ರೋಮೋದಲ್ಲಿದೆ.

ಮಧ್ವ ಪರಂಪರೆಯತ್ತ ಹೊರಳುವ ಪ್ರೋಮೋದಲ್ಲಿ ತಿರುಪತಿ ತಿಮ್ಮಪ್ಪನ ಮುಚ್ಚಿದ ಬಾಗಿಲನ್ನು ಶ್ರೀ ರಾಘವೇಂದ್ರ ಸ್ವಾಮಿಗಳೇ ತೆರೆಯುತ್ತಾರೆ. ಅಲ್ಲಿಗೆ ರಾಯರ ಮುಖದರ್ಶನವಾಗುತ್ತದೆ.

2010ರಲ್ಲಿ ಸುವರ್ಣ ವಾಹಿನಿ...