Bengaluru, ಮೇ 14 -- ಕನ್ನಡ ಕಿರುತೆರೆ ಮತ್ತು ಸಿನಿಮಾಗಳಲ್ಲಿ ನಟಿಯಾಗಿ ಗುರುತಿಸಿಕೊಂಡು ಬಿಗ್‌ ಬಾಸ್‌ ಮೂಲಕ ಹೆಚ್ಚು ಮುನ್ನೆಲೆಗೆ ಬಂದವರು ನಟಿ ನಮ್ರತಾ ಗೌಡ.

ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಿರುವ ನಟಿ ನಮ್ರತಾ, ಆಗಾಗ ಕಲರ್‌ಫಿಲ್‌ ಫೋಟೋಗಳ ಗೊಂಚಲನ್ನು ಶೇರ್‌ ಮಾಡುತ್ತ ಸುದ್ದಿಯಲ್ಲಿರುತ್ತಾರೆ.

ಇದೆಲ್ಲದರ ನಡುವೆ ಇದೇ ಸೋಷಿಯಲ್‌ ಮೀಡಿಯಾದಲ್ಲ ಕೆಲವೊಮ್ಮೆ ನಿಂದನೆಗೊಳಗಾದ ಉದಾಹರಣೆಗಳೂ ಇವೆ. ಈಗ ಅಂಥದ್ದೇ ಒಂದು ವಿಚಾರವನ್ನು ಬಹಿರಂಗವಾಗಿ ಎಲ್ಲರೆದುರು ತೆರೆದಿಟ್ಟಿದ್ದಾರೆ.

ಅದೇನಪ್ಪ ಅಂದರೆ, ನಟಿ ನಮ್ರತಾಗೆ ರಾಜಕಾರಣಿಗಳು ಮತ್ತು ವಿಐಪಿಗಳ ಜೊತೆಗೆ ಡೇಟಿಂಗ್‌ ಹೋಗುವಂತೆ ವ್ಯಕ್ತಿಯೊಬ್ಬ ದುಂಬಾಲು ಬಿದ್ದಿದ್ದಾನೆ. ಡೇಟಿಂಗ್‌ ಹೋದರೆ ಲಕ್ಷ ಲಕ್ಷ ಹಣ ನೀಡುವುದಾಗಿಯೂ ಹೇಳಿದ್ದಾನೆ.

ಇನ್‌ಸ್ಟಾಗ್ರಾಂನಲ್ಲಿ ರೋಷನ್‌ (rocky.g43) ಎಂಬ ಇನ್‌ಸ್ಟಾಗ್ರಾಂ ಖಾತೆಯಿಂದ ಪರ್ಸನಲ್‌ ಸಂದೇಶಗಳು ನಮ್ರತಾ ಅವರಿಗೆ ಕಳೆದ ವರ್ಷದಿಂದ ಬರುತ್ತಲೇ ಇವೆ. ಇದೀಗ ಆ ಸಂದೇಶಕ್ಕೆ ಫುಲ್‌ ಸ್ಟಾಪ್‌ ಇಟ್ಟಿದ್ದಾರೆ.

ಹಾಗಾದರೆ...