ಭಾರತ, ಮೇ 10 -- ಭಾರತ ಮತ್ತು ಪಾಕ್‌ ನಡುವೆ ಇದೀಗ ಯುದ್ಧದ ಕಾರ್ಮೋಡ ಆವರಿಸಿದೆ. ಈ ಯುದ್ಧದ ಬೆನ್ನಲ್ಲೇ ಸಿನಿ ವಲಯದಲ್ಲಿ ʻಆಪರೇಷನ್ ಸಿಂದೂರʼ ಹೆಸರಿಗೆ ಪೈಪೋಟಿ ನಡೆದಿದೆ. ಬಾಲಿವುಡ್‌ನ ಘಟಾನುಘಟಿ ನಿರ್ಮಾಣ ಸಂಸ್ಥೆಗಳು ಈ ಸಿನಿಮಾ ಶೀರ್ಷಿಕೆಗೆ ಪೈಪೋಟಿ ನಡೆಸಿವೆ. ಆದರೆ, ಆ ಶೀರ್ಷಿಕೆ ಅಧಿಕೃತವಾಗಿ ಯಾರಿಗೆ ಸಿಕ್ಕಿದೆ ಎಂಬುದು ಖಚಿತವಾಗಿಲ್ಲ. ಇದೆಲ್ಲ ಬೆಳವಣಿಗೆ ನಡುವೆಯೇ ʻಆಪರೇಷನ್‌ ಸಿಂದೂರʼ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಆಗಿದೆ. ಅಷ್ಟೇ ಅಲ್ಲ ಇದೇ ಚಿತ್ರದ ಪೋಸ್ಟರ್‌ ನೋಡಿದ ನೆಟ್ಟಿಗರು ಚಿತ್ರತಂಡವನ್ನು ಟ್ರೋಲ್‌ ಮಾಡಿದ್ದಾರೆ.

ನಿಕ್ಕಿ ವಿಕ್ಕಿ ಭಗ್ನಾನಿ ಫಿಲ್ಮ್ಸ್ ಮತ್ತು ದಿ ಕಂಟೆಂಟ್ ಎಂಜಿನಿಯರ್ ಸಂಸ್ಥೆ, ʻಆಪರೇಷನ್‌ ಸಿಂದೂರʼ ಹೆಸರಿನ ಸಿನಿಮಾವನ್ನು ಘೋಷಣೆ ಮಾಡಿದೆ. ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ, ಭಾರತ ಸರ್ಕಾರವು ʻಆಪರೇಷನ್ ಸಿಂದೂರʼ ಮೂಲಕ ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ 9 ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಿತ್ತು. ಇದೀಗ ಇದೇ ನೈಜ ಘಟನೆಯನ್ನ...