ಭಾರತ, ಮಾರ್ಚ್ 29 -- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿ ಕಥೆಯೇ ಮುಂದೆ ಸಾಗುತ್ತಿಲ್ಲ ಎಂದು ನಿರಾಸೆ ಮಾಡಿಕೊಂಡಿದ್ದ ವೀಕ್ಷಕರಿಗೆ ಹಾಗೂ ಲಕ್ಷ್ಮೀ ಬಾರಮ್ಮ ಧಾರಾವಾಹಿಯನ್ನು ಇಷ್ಟಪಟ್ಟು ಇಷ್ಟು ದಿನಗಳ ಕಾಲ ವೀಕ್ಷಿಸಿದವರಿಗೆ ಇಲ್ಲೊಂದು ಕುತೂಹಲಕರ ಸಂಗತಿ ಇದೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಕೊನೆ ಹಂತಕ್ಕೆ ಬಂದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿದೆ. ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಕೊನೆ ಹಂತದ ಶೂಟಿಂಗ್ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಅದೇ ತಂಡದ ಸದಸ್ಯರು ಹಂಚಿಕೊಂಡ ಫೋಟೋ ಒಂದು ವೈರಲ್ ಆಗುತ್ತಿದೆ. ಫೋಟೋ ಹಂಚಿಕೊಂಡು ನಂತರ ಆ ಫೋಟೋವನ್ನು ಡಿಲೀಟ್ ಕೂಡ ಮಾಡಿದ್ದರು ಎಂದು ಬೇರೆ ಬೇರೆ ಜಾಲತಾಣಗಳು ವರದಿ ಮಾಡಿದ್ದವು.

ಆದರೆ ಈಗ ಲಭ್ಯವಾದ ಫೋಟೋವನ್ನು ನೋಡಿದರೆ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಮುಕ್ತಾಯ ಹಂತದ ಶೂಟಿಂಗ್ ನಡೆದಂತಿದೆ. ಧಾರಾವಾಹಿ ತಂಡದ ಎಲ್ಲ ಸದಸ್ಯರು ಒಟ್ಟಾಗಿ ನಿಂತು ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ ದಿನವೂ ಶೂಟಿಂಗ್ ನಡೆಯುವ ಕಾರಣ ಎ...