ಭಾರತ, ಮಾರ್ಚ್ 31 -- Kannada Devotional Song: ಅಯೋಧ್ಯ ಶ್ರೀರಾಮನ ದೇವಸ್ಥಾನ ಉದ್ಘಾಟನೆ ಬಳಿಕ ಕನ್ನಡದಲ್ಲಿ ರಾಮನ ಕುರಿತಾದ ಸಾಕಷ್ಟು ಆಲ್ಬಂ ಹಾಡುಗಳು ಬಿಡುಗಡೆ ಆದವು. ಇದೀಗ ಅಂಥದ್ದೇ ʻಭಾರತ ಕಂಡ ಅಯೋಧ್ಯ ರಾಮʼ ಆಲ್ಬಂ ಹಾಡು ಇತ್ತೀಚೆಗಷ್ಟೇ ಬಿಡುಗಡೆ ಆಗಿದೆ. ʻರಾಮ ರಾಮ ರಾಮ ಎಂಬ ರಾಮ ಜಪದಲಿ ಜಗವ ಕಾಣಬಹುದು..' ಸಾಲಿನಲ್ಲಿ 'ಭಾರತ ಕಂಡ ಅಯೋಧ್ಯ ರಾಮ' ಎಂಬ ಮೂರು ನಿಮಿಷದ ವಿಡಿಯೋ ಆಲ್ಬಂ ಹಾಡನ್ನು ಮಾಜಿ ವಿಧಾನ ಪರಿಷತ್ ಸದಸ್ಯ ಲಕ್ಷೀನಾರಾಯಣ ಮತ್ತು ಮಾಜಿ ಶಾಸಕ ನೆ.ಲ. ನರೇಂದ್ರಬಾಬು ಬಿಡುಗಡೆ ಮಾಡಿದ್ದಾರೆ.

ಅತ್ರೇಯ ಕ್ರಿಯೇಷನ್ ಬ್ಯಾನರ್‌ನಲ್ಲಿ ಡಾ. ಸುಮಿತಾ ಪ್ರವೀಣ್ ಹಾಗೂ ಪ್ರವೀಣ್.ಸಿ. ಬಾನು ತಮ್ಮ ಮಗಳ ಸಲುವಾಗಿ ಈ ಹಾಡನ್ನು ನಿರ್ಮಾಣ ಮಾಡಿದ್ದಾರೆ. 'ಗಂಗೆ ಗೌರಿ' 'ತಾರಕೇಶ್ವರ' 'ಟೇಕ್ವಾಂಡೋ ಗರ್ಲ್' ಚಿತ್ರಗಳ ಖ್ಯಾತಿಯ ಕು. ಋತುಸ್ಪರ್ಶ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಸಿ. ವೀರೇಂದ್ರ ಬೆಳ್ಳಿಚುಕ್ಕಿ ಹಾಡಿನ ಪರಿಕಲ್ಪನೆ ಜತೆಗೆ ಸಾಹಿತ್ಯ ಬರೆದು ನಿರ್ದೇಶನವನ್ನು ಮಾಡಿದ್ದಾರೆ.

ಇದನ್ನೂ ಓದಿ: ʻ45ʼ ಚಿ...