ಭಾರತ, ಏಪ್ರಿಲ್ 19 -- ಸೋಷಿಯಲ್‌ ಮೀಡಿಯಾದಲ್ಲಿ ಇದೀಗ ಬಾಲಿವುಡ್‌ ನಟ ನಿರ್ದೇಶಕ ಅನುರಾಗ್‌ ಕಶ್ಯಪ್‌ ನೀಡಿದ ಹೇಳಿಕೆ ಚರ್ಚೆಯ ವಿಷಯವಾಗಿದೆ. ಬ್ರಾಹ್ಮಣ ಸಮುದಾಯದ ಬಗ್ಗೆ ಕಟುವಾಗಿ ಕಾಮೆಂಟ್‌ ಹಾಕಿರುವ ಅವರ ನಡೆಗೆ ಇದೀಗ ದೇಶವ್ಯಾಪಿ ವಿರೋಧ ವ್ಯಕ್ತವಾಗುತ್ತಿದೆ. ಕೆಲವೆಡೆ ಪ್ರತಿಭಟನೆಗಳು ನಡೆಯುತ್ತಿದ್ದರೆ, ಇನ್ನು ಕೆಲವೆಡೆ ಅವರ ವಿರುದ್ಧ ದೂರು ನೀಡುವ ಕೆಲಸವಾಗುತ್ತಿದೆ. ಈ ನಡುವೆ ಇದೇ ಅನುರಾಗ್‌ ಕಶ್ಯಪ್‌ ಹೇಳಿಕೆ ಬಗ್ಗೆ ಸ್ಯಾಂಡಲ್‌ವುಡ್‌ ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ಪ್ರತಿಕ್ರಿಯೆ ನೀಡಿದ್ದಾರೆ. "ಪ್ರತಿಭಾನ್ವಿತ ಚಲನಚಿತ್ರ ನಿರ್ದೇಶಕರಾಗಿರುವ ಕಶ್ಯಪ್, ಇಂತಹ ಪ್ರಶ್ನಾರ್ಹ ಪದಗಳಿಗೆ ಕ್ಷಮೆಯಾಚಿಸಬೇಕು" ಎಂದಿದ್ದಾರೆ.

ನಟ ಚೇತನ್‌ ಅಹಿಂಸಾ ಸಿನಿಮಾ ನಟನಾದರೂ, ಸಮಾಜದಲ್ಲಿ ನಡೆಯುವ ಘಟನೆಗಳ ಬಗ್ಗೆ ತಮ್ಮದೇ ಆದ ಅನಿಸಿಕೆ ಅಭಿಪ್ರಾಯಗಳನ್ನು ಸೋಷಿಯಲ್‌ ಮೀಡಿಯಾ ಮೂಲಕ ಹಂಚಿಕೊಳ್ಳುತ್ತಿರುತ್ತಾರೆ. ರಾಜಕೀಯ, ಸಿನಿಮಾ, ಕ್ರೀಡೆ ಹೀಗೆ ಎಲ್ಲ ಕ್ಷೇತ್ರಗಳ ಬೆಳವಣಿಗೆಗಳ ಬಗ್ಗೆ ಮಾತನಾಡುತ್ತಿರುತ್ತಾರೆ. ಕ...