Bengaluru, ಏಪ್ರಿಲ್ 22 -- ಸೋಷಿಯಲ್‌ ಮೀಡಿಯಾದಲ್ಲಿ ಇತ್ತೀಚಿನ ಒಂದು ವಾರದಿಂದ ನಟ, ನಿರ್ದೇಶಕ ಅನುರಾಗ್ ಕಶ್ಯಪ್‌ ಸುದ್ದಿಯಲ್ಲಿದ್ದಾರೆ. ಅನಂತ್ ಮಹಾದೇವನ್ ನಿರ್ದೇಶಿಸಿದ ʻಫುಲೆʼ ಸಿನಿಮಾ ಬಿಡುಗಡೆಗೆ ವಿಳಂಬವಾಗಿದ್ದಕ್ಕೆ ಅನುರಾಗ್ ಕಶ್ಯಪ್‌, ಸೆನ್ಸಾರ್‌ ಬೋರ್ಡ್‌ನ ಒಂದಷ್ಟು ಬದಲಾವಣೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಆ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದ ಅನುರಾಗ್‌, ಆ ಪೋಸ್ಟ್‌ಗೆ "ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆ, ಏನಿವಾಗ?" ಎಂದಿದ್ದರು. ಆ ಕಾಮೆಂಟ್ ದೇಶಾದ್ಯಂತ ವ್ಯಾಪಕ ಟೀಕೆಗೆ ಗುರಿಯಾದ ಬೆನ್ನಲ್ಲೇ ಕ್ಷಮಾಪಣೆಯ ಪೋಸ್ಟ್‌ ಸಹ ಶೇರ್‌ ಮಾಡಿದ್ದರು. ಇದೀಗ ಮಗದೊಂದು ಬರಹವನ್ನು ಪ್ರಕಟಿಸಿದ್ದಾರೆ.

"ಕೋಪದಲ್ಲಿ ಯಾರಿಗಾದರೂ ಉತ್ತರಿಸುವಲ್ಲಿ ನಾನು ನನ್ನ ಮಿತಿಗಳನ್ನು ಮರೆತಿದ್ದೇನೆ. ಅದಕ್ಕೆ ಎಲ್ಲರ ಬಳಿ ಕ್ಷಮೆಯಾಚಿಸುವೆ. ಇಡೀ ಬ್ರಾಹ್ಮಣ ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತನಾಡಿದೆ. ನನ್ನ ಜೀವನದಲ್ಲಿ ಅನೇಕ ಜನರು ಆ ಸಮುದಾಯದವರು. ಇಂದಿಗೂ ಸಾಕಷ್ಟು ಜನರಿದ್ದಾರೆ. ಬಹಳ...