Bengaluru, ಏಪ್ರಿಲ್ 18 -- ಬಹುಭಾಷಾ ನಟ, ನಿರ್ದೇಶಕ ಅನುರಾಗ್‌ ಕಶ್ಯಪ್‌ ಇದೀಗ ಏನೋ ಮಾಡಲು ಹೋಗಿ ಪೇಚಿಗೆ ಸಿಲುಕಿದ್ದಾರೆ. ಇರಲಾರದೆ ಇರುವೆ ಬಿಟ್ಟುಕೊಂಡ ಸ್ಥಿತಿಯಲ್ಲಿದ್ದಾರೆ. ಜ್ಯೋತಿಬಾ ಫುಲೆ ಅವರ ಜೀವನಾಧರಿತ ʻಫುಲೆʼ ಸಿನಿಮಾ ವಿಚಾರವಾಗಿ ಮಾತನಾಡುವ ಭರದಲ್ಲಿ ಬ್ರಾಹ್ಮಣ ಸಮುದಾಯದ ಬಗ್ಗೆ ತುಚ್ಯವಾಗಿ ಮಾತನಾಡಿ, ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಅನುರಾಗ್‌ ಕಶ್ಯಪ್‌ ಅವರ ಹೇಳಿಕೆಗೆ ಇದೀಗ ಇಡೀ ಬ್ರಾಹ್ಮಣ ಸಮುದಾಯವೇ ಕೆರಳಿದೆ. ದೇಶದ ಕೆಲವೆಡೆ ಪ್ರತಿಭಟನೆಗಳೂ ನಡೆಯುತ್ತಿವೆ. ಅಷ್ಟಕ್ಕೂ ಅನುರಾಗ್‌ ಹೇಳಿದ ಮಾತೇನು? ಅದರ ಹಿಂದಿನ ಉದ್ದೇಶ ಏನಾಗಿತ್ತು? ಇದೆಲ್ಲದರ ಮಾಹಿತಿ ಇಲ್ಲಿದೆ.

ಅನಂತ್ ಮಹಾದೇವನ್ ನಿರ್ದೇಶಿಸಿದ ʻಫುಲೆʼ ಸಿನಿಮಾ ಇನ್ನೇನು ಬಿಡುಗಡೆಗೆ ಸನಿಹದಲ್ಲಿದೆ. ಈ ಚಿತ್ರದಲ್ಲಿ ಸಮಾಜ ಸುಧಾರಕರಾದ' ಜ್ಯೋತಿಬಾ ಫುಲೆ ಪಾತ್ರದಲ್ಲಿ ಪ್ರತೀಕ್‌ ಗಾಂಧಿ ನಟಿಸಿದರೆ, ಸಾವಿತ್ರಿಬಾಯಿ ಫುಲೆ ಪಾತ್ರದಲ್ಲಿ ಪತ್ರಲೇಖ ಕಾಣಿಸಿಕೊಂಡಿದ್ದಾರೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಏಪ್ರಿಲ್‌ 11ರಂದು ತೆರೆಗೆ ಬರಬ...