ಭಾರತ, ಮೇ 1 -- ಜೀ ಕನ್ನಡದಲ್ಲಿ ರಾತ್ರಿ 10 ಗಂಟೆಗೆ ಪ್ರಸಾರವಾಗುವ ʻಬ್ರಹ್ಮಗಂಟುʼ ಸೀರಿಯಲ್‌ ಮೂಲಕ ನರಸಿಂಹ ಪಾತ್ರ ಮನೆ ಮಂದಿಗೆ ಇಷ್ಟವಾಗಿದೆ.

ಬ್ರಹ್ಮಗಂಟು ಧಾರಾವಾಹಿಯಲ್ಲಿ ಎರಡನೇ ನಾಯಕನಾಗಿಯೂ ನರಸಿಂಹ ಅಲಿಯಾಸ್‌ ಭರತ್‌ ನಾಯ್ಕ್‌ ನಟಿಸುತ್ತಿದ್ದಾರೆ.

ಇಂದು ಇದೇ ನರಸಿಂಹ ಪಾತ್ರಧಾರಿ ಭರತ್‌ ನಾಯ್ಕ್‌ ಅವರ ಬರ್ತ್‌ಡೇ. ಈ ನಿಮಿತ್ತ ಜೀ ಕನ್ನಡ ಸೋಷಿಯಲ್‌ ಮೀಡಿಯಾ ಪೋಸ್ಟ್‌ ಮೂಲಕ ಹುಟ್ಟು ಹಬ್ಬದ ಶುಭಾಶಯ ಕೋರಿದೆ. ಆ ಪೋಸ್ಟ್‌ಗೆ ಭರತ್‌ ಅವರ ಅಭಿಮಾನಿಗಳು ಕಾಮೆಂಟ್‌ ಮೂಲಕ ಶುಭ ಹಾರೈಸುತ್ತಿದ್ದಾರೆ.

ರಂಗಭೂಮಿ ಹಿನ್ನೆಲೆಯಿಂದ ಬಂದ ಭರತ್‌ ನಾಯ್ಕ್‌, ಸಾಕಷ್ಟು ಡ್ರಾಮಾಗಳಲ್ಲಿಯೂ ನಟಿಸಿದ್ದಾರೆ. ಬಗೆಬಗೆ ಪಾತ್ರ ಪೋಷಣೆಯನ್ನೂ ಮಾಡಿದ್ದಾರೆ.

ಅಲ್ಲಿಂದ ಅದೇ ರಂಗಭೂಮಿಯ ನಂಟಿನಿಂದ ಸೀರಿಯಲ್‌ನಲ್ಲಿಯೂ ಚಾನ್ಸ್‌ ಗಿಟ್ಟಿಸಿಕೊಂಡು, ಇದೀಗ ಎಲ್ಲರ ಇಷ್ಟದ ನಟನಾಗಿ ಗುರುತಿಸಿಕೊಂಡಿದ್ದಾರೆ.

ಬರೀ ನಟನೆ ಮಾತ್ರವಲ್ಲದೆ, ಗಾಯನದಲ್ಲಿಯೂ ನಟ ಭರತ್‌ ನಾಯ್ಕ್‌ ಮುಂದು. ಹಾಡಿನ ಮೂಲಕವೇ ಗಮನ ಸೆಳೆದು, ತಮ್ಮದೇ ಆದ ಮ್ಯೂಸಿಕ್‌ ಬ್ಯಾಂ...