ಭಾರತ, ಏಪ್ರಿಲ್ 25 -- ಶಿವರಾಜಕುಮಾರ್ ಅವರ ಮಗಳು ನಿವೇದಿತಾ ಶಿವರಾಜಕುಮಾರ್ ಅವರಿಗೆ ನಿರ್ಮಾಣ ಹೊಸದಲ್ಲ. ಕೆಲವು ವರ್ಷಗಳ ಹಿಂದೆಯೇ ಅವರು ಧಾರಾವಾಹಿ ಮತ್ತು ವೆಬ್‍ ಸೀರೀಸ್‍ಗಳ ನಿರ್ಮಾಣ ಮಾಡಿದ್ದರು. ಈಗ ಇದೇ ಮೊದಲ ಬಾರಿಗೆ 'ಫೈರ್ ಫ್ಲೈ' ಮೂಲಕ ಚಿತ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಮೊದಲ ಚಿತ್ರ ಹೇಗಿದೆ? ನೀವೇ ತಿಳಿದುಕೊಳ್ಳಿ

ನಾಲ್ಕು ವರ್ಷಗಳ ಕಾಲ ಅಪ್ಪ-ಅಮ್ಮನಿಂದ ದೂರವಿದ್ದು ವಿದೇಶದಲ್ಲಿ ನೆಲೆಸಿದ್ದ ವಿವೇಕಾನಂದ ಅಲಿಯಾಸ್‍ ವಿಕ್ಕಿ (ವಂಶಿ), ತನ್ನ ದೊಡ್ಡಪ್ಪನ ಮಗನ ಮದುವೆಯಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಬರುತ್ತಾನೆ. ನಾಲ್ಕು ವರ್ಷಗಳ ನಂತರ ಅಪ್ಪ-ಅಮ್ಮನನ್ನು ಭೇಟಿ ಮಾಡುತ್ತಿರುವ ಸಂತೋಷ ಹೆಚ್ಚು ಹೊತ್ತು ಉಳಿಯುವುದಿಲ್ಲ. ಭೇಟಿ ಆಗಿ ಕೆಲವೇ ನಿಮಿಷಗಳಲ್ಲಿ ಅಪ್ಪ-ಅಮ್ಮ ಇಬ್ಬರೂ ಕಾರ್ ಅಪಘಾತದಲ್ಲಿ ನಿಧನರಾಗುತ್ತಾರೆ. ವಿಕ್ಕಿ ಮೂರು ತಿಂಗಳ ಕಾಲ ಕೋಮಾಗೆ ಜಾರುತ್ತಾನೆ. ಮೂರು ತಿಂಗಳ ನಂತರ ಪ್ರಜ್ಞೆ ಮರಳುತ್ತದಾದರೂ ಅವನು ಮೊದಲಿನಂತೆ ಇರುವುದಿಲ್ಲ. ದೊಡ್ಡ ಕುಟುಂಬವಿದ್ದರೂ ಒಬ್ಬಂಟಿಯಾಗಿರುವ ಆತ ಖಿನ್...