ಭಾರತ, ಮಾರ್ಚ್ 29 -- Shruthi Narayanan video: ತಮಿಳು ಕಿರುತೆರೆ ಮತ್ತು ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡಿರುವ ಶ್ರುತಿ ನಾರಾಯಣನ್, ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯಲ್ಲಿದ್ದಾರೆ. ಇತ್ತೀಚೆಗಷ್ಟೇ ಅವರ ಖಾಸಗಿ ವಿಡಿಯೋ ಲೀಕ್‌ ಆದ ಬೆನ್ನಲ್ಲೇ, ಜಾಲತಾಣದಲ್ಲಿ ಹೆಚ್ಚು ಹುಡುಕಲ್ಪಟ್ಟಿದ್ದಾರೆ. ಅವರ 14 ನಿಮಿಷದ ಖಾಸಗಿ ವಿಡಿಯೋ ಹಲವು ವೆಬ್‌ಸೈಟ್‌ಗಳಲ್ಲಿಯೂ ಅಪ್‌ಲೋಡ್‌ ಆಗಿದೆ. ಟ್ವಿಟ್ಟರ್‌ನಲ್ಲಿ ನಟಿಯ ಅಶ್ಲೀಲ ಫೋಟೋಗಳು ವೈರಲ್‌ ಆಗಿದ್ದು, ಇದೀಗ ಈ ಬಗ್ಗೆ ಮೊದಲ ಸಲ ಶ್ರುತಿ ನಾರಾಯಣನ್‌ ಪ್ರತಿಕ್ರಿಯೆ ನೀಡಿದ್ದಾರೆ. ದಯವಿಟ್ಟು ವೀಡಿಯೊ ಹಂಚಿಕೊಳ್ಳುವುದನ್ನು ನಿಲ್ಲಿಸಿ ಎಂದು ವಿನಂತಿಸಿದ್ದಾರೆ.

ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಶ್ರುತಿ ನಾರಾಯಣನ್‌, "ನನ್ನ ಬಗ್ಗೆ ವೈರಲ್ ಆಗಿರುವ ವಿಡಿಯೋ ಹಂಚಿಕೊಳ್ಳುವುದು ನಿಮಗೆ ತಮಾಷೆಯಾಗಿ ಕಾಣಿಸಬಹುದು.. ಆದರೆ ಇದು ನನ್ನ ಜೀವನದ ಪ್ರಶ್ನೆ. ಇದು ನನಗೆ ಮತ್ತು ನನ್ನ ಕುಟುಂಬಕ್ಕೆ ಕಠಿಣ ಪರಿಸ್ಥಿತಿ. ನಾನು ಕೂಡ ಒಬ್ಬ ಹೆಣ್ಣುಮಗಳು...