Bengaluru, ಏಪ್ರಿಲ್ 4 -- ಸ್ಯಾಂಡಲ್‌ವುಡ್‌ಗೆ ಒಬ್ಬರೇ ಮೋಹಕತಾರೆ. ಅವರೇ ನಟಿ ರಮ್ಯಾ. ಸದ್ಯ 42 ವರ್ಷ ವಯಸ್ಸು. ವಯಸ್ಸು ಏರುತ್ತ ಹೋದಂತೆ, ಅವರ ಅಂದ ಮತ್ತಷ್ಟು ಹೊಳೆಯುತ್ತಿದೆ. ಇಂದಿಗೂ ಸಿಂಗಲ್‌ ಆಗಿಯೇ ಇರುವ ಈ ನಟಿ, ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸಕ್ರಿಯರು.

ಪ್ರವಾಸ, ಸುತ್ತಾಟ, ಖಾದ್ಯಗಳ ಫೋಟೋ ಗೊಂಚಲನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡುತ್ತ, ಸದಾ ಆಕ್ಟಿವ್‌ ಆಗಿರುತ್ತಾರೆ. ತಮ್ಮ ಅಭಿಮಾನಿಗಳಿಗೂ ಫೋಟೋಗಳ ಮೂಲಕ ಟ್ರೀಟ್‌ ಕೊಡುತ್ತಿರುತ್ತಾರೆ.

ಇದೀಗ ಇದೇ ನಟಿ ವೈಟ್‌ ಬ್ಲೇಜರ್‌ ಧರಿಸಿ, ಜೀನ್ಸ್‌ ಪ್ಯಾಂಟ್‌ನಲ್ಲಿ ಬಗೆ ಬಗೆ ಭಂಗಿಯಲ್ಲಿ ಫೋಟೋಗಳಿಗೆ ಪೋಸ್‌ ನೀಡಿದ್ದಾರೆ

ಹೀಗೆ ಸಾಲು ಸಾಲು ಫೋಟೋಗಳನ್ನು ಶೇರ್‌ ಮಾಡಿದ್ದೇ ತಡ, ತರಹೇವಾರಿ ಕಾಮೆಂಟ್‌ಗಳು ಅಭಿಮಾನಿ ಬಳಗದಿಂದ ಹರಿದು ಬರುತ್ತಿವೆ. ಮನದುಂಬಿ ಮೆಚ್ಚುವುದರ ಜತೆಗೆ ಫಿಟ್‌ನೆಸ್‌ ಜತೆಗೆ ಬ್ಯೂಟಿ ಸಿಕ್ರೆಟ್‌ ಬಗ್ಗೆಯೂ ಕಾಮೆಂಟ್‌ ಹಾಕುತ್ತಿದ್ದಾರೆ.

"ಚಿಕ್ಕ ವಯಸ್ಸಿನಿಂದ ನಿಮ್ಮನ್ನ ನೋಡ್ತಾ ನೋಡ್ತಾ ನಾನೇ ಮುದುಕ ಆಗ್ತಾ ಇದೀನಿ, ಬಟ್‌ ನಿಮಗೇ...