ಭಾರತ, ಏಪ್ರಿಲ್ 19 -- ಪೋಸ್ಟರ್‌ ವಿಚಾರಕ್ಕೆ ವಿವಾದಕ್ಕೆ ಕಾರಣವಾಗಿತ್ತು ಸ್ಪಾರ್ಕ್‌ ಸಿನಿಮಾ. ಇದೀಗ ಇದೇ ಪೋಸ್ಟರ್‌ ವಿವಾದಕ್ಕೆ ತೆರೆಬಿದ್ದಿದೆ. ನೆನಪಿರಲಿ ಪ್ರೇಮ್‌ ಹುಟ್ಟುಹಬ್ಬಕ್ಕೆ ಸ್ಪಾರ್ಕ್‌ ಚಿತ್ರ ತಂಡದಿಂದ ಏಪ್ರಿಲ್‌ 18ರಂದು ಹೊಸ ಪೋಸ್ಟರ್‌ವೊಂದನ್ನು ಬಿಡುಗಡೆ ಮಾಡಿತ್ತು. ಈ ಚಿತ್ರದಲ್ಲಿ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್‌ ಸುಧೀಂದ್ರ ನಾಯಕನಾಗಿ ನಟಿಸುತ್ತಿದ್ದು, ಪ್ರೇಮ್‌ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಪೋಸ್ಟರ್‌ ವಿರುದ್ಧ ನಟಿ, ನಿರ್ಮಾಪಕಿ ಶ್ರುತಿ ನಾಯ್ಡು ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದರು. ಆ ವಿವಾದವೀಗ ತಣ್ಣಗಾಗಿದ್ದು, ಸ್ಪಾರ್ಕ್‌ ಚಿತ್ರದ ನಿರ್ದೇಶಕರು ರಮೇಶ್‌ ಇಂದಿರಾ ಬಳಿ ಕ್ಷಮೆಯಾಚಿಸಿದ್ದಾರೆ.

ಸ್ಪಾರ್ಕ್‌ ಸಿನಿಮಾಗೆ ಯುವ ನಿರ್ದೇಶಕ ಮಹಾಂತೇಶ್ ಹಂದ್ರಾಳ್ ಆಕ್ಷನ್‌ ಕಟ್‌ ಹೇಳಿದ್ದಾರೆ. ನಿರ್ದೇಶಕರಾಗಿ ಇದು ಇವರಿಗೆ ಮೊದಲ ಅನುಭವ. ಹೀಗಾಗಿ ಸಣ್ಣದೊಂದು ತಪ್ಪು ನಡೆದು ಹೋಗಿದೆ. ಆ ತಪ್ಪನ್ನು ಈಗ ತಿದ್ದಿಕೊಂಡಿದ್ದಾರೆ. "ರಮೇಶ್‌ ಇಂದಿರಾ ಅವರ ಬಳಿ ಕ್ಷಮೆ ಕೇಳಿದ್ದು, ...