Bengaluru, ಜೂನ್ 5 -- ಶ್ರೇಯಸ್ ಮಂಜು ನಾಯಕನಾಗಿ ನಟಿಸಿರುವ ಚಿತ್ರ 'ದಿಲ್ ದಾರ್'. ಚಿತ್ರೀಕರಣವನ್ನೆಲ್ಲ ಮುಗಿಸಿಕೊಂಡು ಬಿಡುಗಡೆಗೆ ಅಣಿಗೊಂಡಿರುವ ಚಿತ್ರತಂಡವೀಗ ಭಜರಂಗಿ ಲೋಕಿ ಅವರಿಗೆ ಪೋಸ್ಟರ್ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿದೆ. ಇದರೊಂದಿಗೆ ಭಜರಂಗಿ ಲೋಕಿಯ ಲುಕ್ ಕೂಡಾ ರಿವೀಲ್ ಆದಂತಾಗಿದೆ. ಹಂತ ಹಂತವಾಗಿ ಪಾತ್ರಗಳ ಬಗ್ಗೆ ಒಂದಷ್ಟು ವಿಚಾರ ಹಂಚಿಕೊಳ್ಳುತ್ತಿರುವ ಚಿತ್ರತಂಡ, ಇದೀಗ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಭಜರಂಗಿ ಲೋಕಿ ಪಾತ್ರದ ಚಹರೆಯನ್ನು ಜಾಹೀರಾಗಿಸಿದೆ.

ಇದು ಮಧು ಗೌಡ ಗಂಗೂರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ. ಇದರಲ್ಲಿ ಭಜರಂಗಿ ಲೋಕಿ ವಿಲನ್ ಆಗಿ ಅಬ್ಬರಿಸಿದ್ದಾರೆಂಬ ವಿಚಾರ ಈ ಹಿಂದೆಯೇ ಬಯಲಾಗಿತ್ತು. ಲೋಕಿ ಇದುವರೆಗೂ ಸಾಕಷ್ಟು ಬಗೆಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ನಾನಾ ಶೇಡುಗಳಲ್ಲಿ ವಿಲನ್ ಆಗಿ ಆರ್ಭಟಿಸಿದ್ದಾರೆ. ದಿಲ್ ದಾರ್ ನಲ್ಲಿ ಅವರ ಪಾತ್ರ ಹೇಗಿರಬಹುದೆಂಬ ಕುತೂಹಲ ಸಹಜವಾಗಿಯೇ ಮೂಡಿಕೊಂಡಿತ್ತು. ಇಲ್ಲಿ ಅವರು ಕಾಲೇಜ್ ಬಾಯ್ ಲುಕ್ಕಿನಲ್ಲಿ, ಖಳನ ಪಾತ್ರದಲ್ಲಿ ಕಾಣಿಸಿಕೊಂಡಿದ...